ಕಾರ್ಕಳ: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಹಾಡಿಯಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದಲ್ಲಿ ಜ.2ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ವಿರೇಂದ್ರ (44ವ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಅವರು, ಮಾನಸಿಕವಾಗಿ ನೊಂದಿದ್ದರು. ಡಿ.30ರಂದು ಬೆಳ್ಮಣ್ ಗ್ರಾಮದ ಜಂತ್ರದಲ್ಲಿರುವ ತನ್ನ ಸಂಬAಧಿಕರ ಮನೆಗೆ ಬಂದಿದ್ದರು.
ಮಾನಸಿಕವಾಗಿ ನೊಂದಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.31ರಿಂದ ಜ.2ರ ಮಧ್ಯಾವಧಿಯಲ್ಲಿ ಬೆಳ್ಮಣ್ನ ಸಂಬAಧಿಕರ ಮನೆಯ ಬಳಿಯ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

