ಮೂರು ದಿನಗಳ ಸಮ್ಮೇಳನವನ್ನು ಜ.22 ರವರೆಗೆ ಹೈಬ್ರಿಡ್ ಶೈಲಿಯಲ್ಲಿ ನಡೆಯಲಿದೆ. ಇದರಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಡಿಜಿಪಿಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಸುಮಾರು 100 ಆಹ್ವಾನಿತರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಉಳಿದ ಆಹ್ವಾನಿತರು ರಾಷ್ಟ್ರದಾದ್ಯಂತ ಆನ್ಲೈನ್ನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಮ್ಮೇಳನವು ಸೈಬರ್ ಕ್ರೈಮ್, ಪೋಲೀಸಿಂಗ್ ತಂತ್ರಜ್ಞಾನ, ಭಯೋತ್ಪಾದನೆ ನಿಗ್ರಹ ತೊಂದರೆಗಳು, ಎಡಪಂಥೀಯ ಉಗ್ರವಾದ, ಸಾಮರ್ಥ್ಯ ವರ್ಧನೆ ಮತ್ತು ಜೈಲು ಸುಧಾರಣೆ ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿರುತ್ತದೆ.
ಈ ಸಮ್ಮೇಳನವು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪೊಲೀಸ್ ಮತ್ತು ಗುಪ್ತಚರ ವೃತ್ತಿಪರರಿಂದ ನಿರ್ದಿಷ್ಟ ವಿಷಯಗಳ ಮೇಲೆ ತೀವ್ರವಾದ ಚರ್ಚೆಗಳ ಫಲಿತಾಂಶವಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತಮ ಅಭ್ಯಾಸಗಳನ್ನು ಸಮ್ಮೇಳನದಲ್ಲಿ ಹಂಚಿಕೊಳ್ಳಲಾಗುವುದು ಇದರಿಂದ ರಾಜ್ಯಗಳು ಪರಸ್ಪರ ಕಲಿಯಬಹುದು.