ಅಜೆಕಾರು : ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಕಡ್ತಲ -ದೊಂಡೇರಂಗಡಿ ನಡುವಿನ ಬಂಗೇರು ಪಾದೆ ಎಂಬಲ್ಲಿ ಬೈಕ್ ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂರು ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಗಿರಿಜಾ ಎಂಬವರು ನಿನ್ನೆ ಸಂಜೆ ಅಳಿಯ ಶೇಖರ ನಾಯ್ಕ್ ರೊಂದಿಗೆ ಬೈಕಿನಲ್ಲಿ ನಿನ್ನೆ ಸಂಜೆ ದೊಂಡೇರಂಗಡಿ ಕಡೆಯಿಂದ ಕಡ್ತಲ ಕಡೆಗೆ ಹೋಗುತ್ತಿದ್ದಾಗ ಬಂಗೇರುಪಾದೆ ಎಂಬಲ್ಲಿ ಕಡ್ತಲ ಕಡೆಯಿಂದ ಬಂದ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಶೇಖರ್ ಸಹಸವಾರೆ ಗಿರಿಜಾ ಹಾಗೂ ಇನ್ನೊಂದು ಬೈಕ್ ಸವಾರ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಸ್ಥಳೀಯ ಕ್ಲಿನಿಕ್ ನಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

