ಕಾರ್ಕಳ: ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರು ಸರಬರಾಜು ಆಗುತ್ತಿರುವ ರಾಮಸಮುದ್ರ ಜಲಶುದ್ಧಿಕರಣ ಘಟಕದ ಫಿಲ್ಟರ್ ಮೀಡಿಯಾ ಬದಲಾಯಿಸುವ ಕಾಮಗಾರಿ ಆರಂಭಿಸಲಾಗಿದ್ದು, ಇಡೀ ನಗರಕ್ಕೆ ಒಂದು ವಾರ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಕುಡಿಯುವ ನೀರನ್ನು ಗೃಹ ಬಳಕೆ ಹೊರತುಪಡಿಸಿ ಇತರೇ ಬಳಕೆ ಬಳಸಬಾರದೆಂದು ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ತಿಳಿಸಿದ್ದಾರೆ.
ನೀರು ಪೂರೈಕೆ ಸ್ಥಗಿತಕ್ಕೆ ನಾಗರಿಕರ ಆಕ್ರೋಶ
ಪುರಸಭಾ ವ್ಯಾಪ್ತಿಯಲ್ಲಿ ನಿರಂತರ ಒಂದು ವಾರ ಕುಡಿಯುವ ನೀರು ಸ್ಥಗಿತಗೊಳಿಸಿದರೆ ಜನರಿಗೆ ಸಮಸ್ಯೆಯಾಗುತ್ತದೆ. ಕಾಮಗಾರಿಯ ನಡುವೆ ದಿನಕ್ಕೆ ನಿಗದಿತ ಅವಧಿಯಲ್ಲಿ ನೀರು ಪೂರೈಸಬೇಕು. ಏಕಾಎಕಿ ದುರಸ್ತಿಯ ನೆಪವೊಡ್ಡಿ ನೀರು ಪೂರೈಕೆ ಸ್ಥಗಿತಗೊಳಿಸುವುದು ಸರಿಯಲ್ಲ ಎಂದು ಸ್ಥಳಿಯರು ಪುರಸಭೆ ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.