Share this news

ಕಾರ್ಕಳ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ಸ್ವಚ್ಚ ಭಾರತ ಪರಿಕಲ್ಪನೆಗೆ ಅನುಗುಣವಾಗಿ ಕರ್ನಾಟಕದ ಇಂಧನ ಮತ್ತು ಕನ್ನಡ ಸಂಸ್ಕ್ರತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಅವರ ನಿರ್ದೇಶನದಂತೆ ಕಾರ್ಕಳದ ಪರಶುರಾಮ ಥೀಂ ಪಾರ್ಕ್ ನಲ್ಲಿ ಭಾರತದ ಮೊಟ್ಟ ಮೊದಲ ಪರಿಸರ ಯೋಗ್ಯ ಶೌಚಾಲಯವನ್ನು ಅಳವಡಿಸಲಾಗಿದೆ.


ಭಾರತದ ರಕ್ಷಣಾ ಇಲಾಖೆಯಲ್ಲಿ (ಡಿ.ಆರ್.ಡಿ.ಓ) ಸುಮಾರು ಐವತ್ತು ವರ್ಷಗಳಿಂದ ಸಹಯೋಗ ಹೊಂದಿರುವ ತಮಿಳುನಾಡಿನ ಕೊಯಮುತ್ತೂರು ಮೂಲದ ಮ್ಯಾಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಪ್ರಥಮ ಬಾರಿಗೆ (ಸ್ಮಾರ್ಟ್ ಇ ಟಾಯ್ಲೆಟ್)ಪರಿಸರ ಯೋಗ್ಯ ಶೌಚಾಲಯವನ್ನು ನಿರ್ಮಾಣ ಮಾಡಿದೆ. ಈ ಶೌಚಾಲಯವನ್ನು ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಕಾರ್ಕಳದ ಪರಶುರಾಮ ಥೀಂ ಪಾರ್ಕ್ನಲ್ಲಿ ಅಳವಡಿಸಲಿದೆ.


ಸ್ವಚ್ಚ ಭಾರತ ಪರಿಕಲ್ಪನೆಗೆ ಮುನ್ನುಡಿಯಂತಿರುವ ಈ ಯೋಜನೆ ಸಮಾಜದಲ್ಲಿ ಹೊಸ ಬದಲಾವಣೆ ತರಲಿದೆ. ಈ ಯೋಜನೆ ನೀರಿನ ಸಂರಕ್ಷಣೆಯೊAದಿಗೆ ಭೂಮಿ ತಾಯಿಯನ್ನು ಸಂಪೂರ್ಣವಾಗಿ ಸ್ವಚ್ಚವಾಗಿಡುವುದರಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚ ಭಾರತದ ಕಲ್ಪನೆಗೆ ಸಂಪೂರ್ಣ ಸಹಕಾರವಾಗಲಿದೆ.

ಇದರ ವಿಶೇಷತೆಯೆಂದರೆ ಶೌಚಾಲಯದಲ್ಲಿ ಬಳಸಿದ ನೀರು ಮಾನವ ತ್ಯಾಜ್ಯದೊಂದಿಗೆ ಮ್ಯಾಕ್ ಬಯೋ ಡೈಜೆಸ್ಟರ್ ಮೂಲಕ ಯಾವುದೇ ರೀತಿಯ ವಿದ್ಯುತ್ ಅಥವಾ ಇಂಧನದ ಸಹಾಯವಿಲ್ಲದೆ ಮಾಲಿನ್ಯ ಸಂಸ್ಥೆ ನಿರೀಕ್ಷಿಸಿದ ಮಟ್ಟಕ್ಕೂ ಹೆಚ್ಚಿನ ರೀತಿಯಲ್ಲಿ ಶುದ್ದೀಕರಣಗೊಂಡು ಪುನಃ ಸೋಲಾರ್ ಪಂಪಿನ ಮೂಲಕ ಶೌಚಾಲಯದ ಮೇಲಿನ ಟ್ಯಾಂಕಿಗೆ ವರ್ಗಾವಣೆಯಾಗುತ್ತದೆ.

ಇದರಿಂದ ಬಳಸಿದ ನೀರನ್ನು ಪುನಃ ಸಂರಕ್ಷಿಸಿದAತಾಗುತ್ತದೆ. ಈ ಶೌಚಾಲಯವನ್ನು ಕೇವಲ 20 ದಿನಗಳಲ್ಲಿ ನಿರ್ಮಾಣ ಮಾಡಬಹುದಾಗಿದ್ದು 30 ವರ್ಷಕ್ಕೂ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ. ಶೌಚಾಲಯದ ಒಳಗಡೆಯ ವಿನ್ಯಾಸ ಪಂಚತಾರಾ ಹೋಟೆಲ್‌ಗಳಲ್ಲಿ ಇರುವ ಶೌಚಾಲಯದಂತೆ ನೈರ್ಮಲ್ಯದಿಂದ ಕೂಡಿದೆ.ಇದನ್ನು ಗ್ರಾಮದ ವಿದ್ಯುತ್ ಸಂಪರ್ಕ ಇಲ್ಲದ ಯಾವುದೇ ಸ್ಥಳದಲ್ಲಿ ಕೂಡ ನಿರ್ಮಾಣ ಮಾಡಬಹುದಾಗಿದೆ. ಇದು ಒಂದು ಸಾವಿರ ಲೀಟರ್ ಓವರ್ಹೆಡ್ ಟ್ಯಾಂಕ್ ಹೊಂದಿದ್ದು, ಅತ್ಯಾಧುನಿಕ ತಾಂತ್ರಕ ವ್ಯವಸ್ಥೆ ಬೆಳಕಿನ ವಿನ್ಯಾಸ ಹೊಂದಿದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸ್ವಯಂ ಚಾಲಿತ ಶೌಚಾಲಯ ನೀರು, ಪ್ರಾಕೃತಿಕ ಗಾಳಿಬೆಳಕು ಸೌಕರ್ಯ ಸೇರಿದಂತೆ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.

Leave a Reply

Your email address will not be published. Required fields are marked *