Share this news

ನವದೆಹಲಿ: ಏ.1ರಿಂದ 15 ವರ್ಷಕ್ಕಿಂತ ಹೆಚ್ಚು ಹಳೆಯದಾದ 9 ಲಕ್ಷ ಸರ್ಕಾರಿ ವಾಹನಗಳನ್ನು  ಗುಜರಿಗೆ ಹಾಕಲಾಗುತ್ತದೆ. ಅವುಗಳ ಜಾಗದಲ್ಲಿ ನೂತನ ವಾಹನ ಬಳಕೆ ಆರಂಭಿಸಲಾಗುತ್ತದೆ. ಈ ಮೂಲಕ ಮಾಲಿನ್ಯಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ  ಹೇಳಿದ್ದಾರೆ.

ಉದ್ಯಮ ಸಂಸ್ಥೆ ಎಫ್‌ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಗಡ್ಕರಿ, ‘ಏ.1 ರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಾರ್ವಜನಿಕ ವಲಯಗಳ ಸಾರಿಗೆ ನಿಗಮಗಳ ಸ್ವಾಮ್ಯದಲ್ಲಿರುವ 15 ವರ್ಷ ಮೇಲ್ಪಟ್ಟಹಳೆಯ 9 ಲಕ್ಷಕ್ಕೂ ಅಧಿಕ ವಾಹನಗಳನ್ನು ರದ್ದುಗೊಳಿಸಿ ಅವುಗಳನ್ನು ಗುಜರಿಗೆ ಹಾಕಲು ಅನಮೋದನೆ ನೀಡಲಾಗಿದೆ ಹಾಗೂ ಏಪ್ರಿಲ್‌ನಲ್ಲಿ ಅವುಗಳ ಸ್ಥಾನಕ್ಕೆ ನೂತನ ವಾಹನಗಳನ್ನು ತರಲಾಗುತ್ತದೆ. ಇದು ವಾಯುಮಾಲಿನ್ಯವನ್ನು ಕಡಿಮೆ ಮಾಡುತ್ತದೆ’ ಎಂದರು.

ಆದರೆ ‘ಈ ನಿಯಮವು ದೇಶದ ರಕ್ಷಣೆ, ಆಂತರಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಶಸ್ತ್ರಸಜ್ಜಿತ ವಾಹನಗಳಿಗೆ ಅನ್ವಯಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ‘ಎಥನಾಲ್‌, ಮೆಥನಾಲ್‌, ಬಯೋ- ಸಿಎನ್‌ಜಿ, ಬಯೋ- ಎಲ್‌ಎನ್‌ಜಿ ಹಾಗೂ ವಿದ್ಯುತ್‌ ಚಾಲಿತ ವಾಹನಗಳ ಬಳಕೆಯನ್ನು ಸುಗಮವಾಗಿಸುವಲ್ಲಿ ಸರ್ಕಾರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದರು.

Leave a Reply

Your email address will not be published. Required fields are marked *