ಮಂಗಳೂರು: ಮಂಗಳೂರಿನ ಹಂಪನಕಟ್ಟೆ ಮಿಲಾಗ್ರಿಸ್ ಸಮೀಪದ ಜ್ಯುವೆಲ್ಲರಿ ಅಂಗಡಿಯಲ್ಲಿ ಮುಸುಕುದಾರಿಯೊಬ್ಬ ಕೆಲಸದ ಸಿಬ್ಬಂದಿಗೆ ಚೂರಿ ಇರಿದ ಘಟನೆ ಇಂದು ನಡೆದಿದೆ .
ಚೂರಿ ಇರಿತದಿಂದ ಗಾಯಗೊಂಡಿರುವ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವೇಳೆ ಅಂಗಡಿಯಲ್ಲಿ ಒಬ್ಬರೇ ಇದ್ದರು ಎಂದು ತಿಳಿದುಬಂದಿದ್ದು, ಅಂಗಡಿ ಮಾಲಕರು ಊಟಕ್ಕೆ ಹೋಗಿ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ.. ಸಿ ಸಿ ಕ್ಯಾಮೆರಾದಲ್ಲಿ ಓರ್ವ ಮುಸುಕು ದಾರಿ ಹೊರಗೆ ಬರುವ ದೃಶ್ಯ ಸೆರೆಯಾಗಿದ್ದು ಡಿಸಿಪಿ ಅಂಶುಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.