ಹೆಬ್ರಿ: ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಕಬ್ಬಿನಾಲೆಯಲ್ಲಿ ಸೋಮವಾರ ನಡೆದಿದೆ .
ಜೋಲಿಮಾರು ಅಣ್ಣಪ್ಪ ಗೌಡ (45 ವರ್ಷ) ಮತ್ತು ಅವರ ಅಣ್ಣನ ಮಗ ಅಶೋಕ್ ಗೌಡ (20 ವರ್ಷ) ಮೃತಪಟ್ಟವರು.
ಅವರು ಗ್ರಾಮದ ಬರಡೆ ಬಾಕ್ಯಾರ್ ಎಂಬಲ್ಲಿ ದೈವದ ನೇಮೋತ್ಸವಕ್ಕೆ ಹೋಗಿದ್ದವರು ಸಂಜೆಯ ವೇಳೆ ದೇವರ ಗುಂಡಿಯಲ್ಲಿರುವ ಸಂಬಂಧಿಕರಾದ ದಯಾನಂದ ಎಂಬವರ ಮನೆಗೆ ಹೋಗಿ ಅಲ್ಲಿಂದ ರಾತ್ರಿ 7:45ರ ವೇಳೆಗೆ ತಮ್ಮ ಮನೆಗೆ ಹೋಗುತ್ತಿದ್ದಾಗ ಸಿಜು ಮೋನ್ ಎಂಬವರ ಜಾಗದಲ್ಲಿರುವ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದರು. ಅಣ್ಣಪ್ಪ ಗೌಡರನ್ನು ರಕ್ಷಿಸಲು ಅಶೋಕ್ ಗೌಡ ಕೆರೆಗೆ ಹಾರಿದ್ದು ಈಜು ಬಾರದೆ ನೀರಿನಲ್ಲಿ ಮುಳುಗಿ ಮತಪಟ್ಟಿದ್ದಾರೆ.
ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸತತ ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಅಣ್ಣಪ್ಪ ಗೌಡ ಮೃತದೇಹವನ್ನು ಮೇಲಕೆತ್ತಿದ್ದಾರೆ. ಅಶೋಕ್ ಗೌಡ ಅವರ ಮೃತ ದೇಹವನ್ನು ಇಂದು ಬೆಳಿಗ್ಗೆ ಮೇಲಕ್ಕೆತ್ತಲಾಯಿತು. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ