ಉಡುಪಿ: ಉಡುಪಿ ತಾಲೂಕಿನ ಮೂಡುಬೆಳ್ಳೆಯಲ್ಲಿ ಇಂದು ಬೆಳಗ್ಗೆ ಮಹೀಂದ್ರ ಪಿಕಪ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರ್ಕಳದ ಕಲ್ಯಾ ಕುಂಟಾಡಿ ರಕ್ತೇಶ್ವರಿ ಭಜನಾ ಮಂಡಳಿಯ ಹರೀಶ್ ನಾಯ್ಕ್ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಉಡುಪಿಯಿಂದ ಎಂದಿನಂತೆ ತನ್ನ ಕೆಲಸ ಮುಗಿಸಿಕೊಂಡು ಕುಂಟಾಡಿಯ ಕಲ್ಕಾರುವಿನ ತನ್ನ ಮನೆಗೆ ಬರುತ್ತಿದ್ದ ಹರೀಶ್ ನಾಯ್ಕ್ ಅವರ ಬೈಕ್ ಗೆ ಮೂಡುಬೆಳ್ಳೆಯ ತಿರುವೊಂದರಲ್ಲಿ ಬೆಳಿಗ್ಗೆ 6.50ರ ವೇಳೆಗೆ ಎದುರಿನಿಂದ ಯಮಸ್ವರೂಪಿಯಾಗಿ ರಾಂಗ್ ಸೈಡ್ ನಿಂದ ಬಂದ ಪಿಕಪ್ ಡಿಕ್ಕಿಯಾಗಿದೆ .ಪಿಕಪ್ ಡಿಕ್ಕಿಯಾದ ರಭಸಕ್ಕೆ ಹರೀಶ್ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಹರೀಶ್ ನಾಯಕ್ ಅವರು ಕುಂಟಾಡಿಯ ರಕ್ತೇಶ್ವರಿ ಭಜನಾ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದು ದೇವತಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದರು .ಕಳೆದ 2017ರಲ್ಲಿ ವಿವಾಹವಾಗಿದ್ದ ಹರೀಶ್ ನಾಯಕ್ ಅವರು ಪತ್ನಿ, 8 ತಿಂಗಳ ಮಗು, ತಂದೆ ತಾಯಿ ಸೇರಿದಂತೆ ಅಪಾರ ಬಂಧುಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.