Share this news

ಕಾರ್ಕಳ: ಗಗನಚುಂಬಿ ಕಟ್ಟಡಗಳು ಹಾಗೂ ಬೃಹತ್ ಬೆಟ್ಟಗಳನ್ನು ಯಾವುದೇ ಸಾಧನಗಳಿಲ್ಲದೇ ಕ್ಷಣಮಾತ್ರದಲ್ಲಿ ಏರಬಲ್ಲ ಕೋತಿರಾಜ್ಯ ಎಂದೇ ಖ್ಯಾತಿಪಡೆದಿರುವ ಜ್ಯೋತಿರಾಜ್ ನಾಳೆ (ಬುಧವಾರ) ಬೆಳಗ್ಗೆ 10 ಗಂಟೆಗೆ ಕಾರ್ಕಳ ಸಾಲ್ಮರದಲ್ಲಿನ ಸಮೃದ್ಧಿ ಹಿಲ್ಸ್ ಎನ್ನುವ ಬಹುಮಹಡಿ ಕಟ್ಟಡ ಏರುವ ಮೂಲಕ ಕಾರ್ಕಳ ಜನತೆಗೆ ರಸದೌತಣ ನೀಡಲಿದ್ದಾರೆ.


ಬೃಹತ್ ಕಟ್ಟಡಗಳನ್ನು ಬಹಳ ಸಲೀಸಾಗಿ ಹತ್ತುವ ಕಲೆಹೊಂದಿರುವ ಕೋತಿರಾಜ್ ಈವರೆಗೂ ಸಾವಿರಕ್ಕೂ ಅಧಿಕ ಕಟ್ಟಡಗಳನ್ನು,ಬೆಟ್ಟಗಳನ್ನು ಏರುವ ಮೂಲಕ ರಾಷ್ಟçಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.ಚಿತ್ರದುರ್ಗದ ಕೋಟೆ,ಹಿಮಾಲಯ, ಜೋಗದ ಬೆಟ್ಟ ಹತ್ತುವ ಮೂಲಕ ವಿಶಿಷ್ಟ ಸಾಧನೆಗೈದಿರುವ ಕೋತಿರಾಜ್ ಅವರಿಗೆ ನಾಳೆ ಕಾರ್ಕಳದ ಬಹುಮಹಡಿ ಕಟ್ಟಡ ಟಾರ್ಗೆಟ್ ಆಗಿದೆ. ಕೋತಿರಾಜ್ ಅವರ ಈ ಸಾಧನೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದು,ಜನರು ಮುಕ್ತವಾಗಿ ಭಾಗವಹಿಸಬಹುದಾಗಿದೆ ಎಂದು ಕೋತಿರಾಜ್ ವಿನಂತಿಸಿಕೊAಡಿದ್ದಾರೆ.
ಕಟ್ಟಡ ಏರಲು ಈಗಾಗಲೇ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅನುಮತಿ ಪಡೆದಿದ್ದು, ಜನರು ಕೋತಿರಾಜ್ ಸಾಧನೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

Leave a Reply

Your email address will not be published. Required fields are marked *