ಉಡುಪಿ : ಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ ಸಂಬಂಧ ವಿದ್ಯಾರ್ಥಿಗಳು, ವೈದ್ಯರು ಬಂಧನವಾದ ಬೆನ್ನಲ್ಲೆ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದಲ್ಲೂ ಪತ್ತೆಯಾಗಿದ್ದು, ಕಾಲೇಜಿನಿಂದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.
ಈಗಾಗಲೇ ಮಾಹೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಡ್ರಗ್ಸ್ ದಂಧೆ ಪೆಡ್ಲಿಂಗ್ನಲ್ಲಿ ಭಾಗಿಯಾಗಿದ್ದ, ವಿದ್ಯಾರ್ಥಿಗಳ ವಿರುದ್ಧ ಕಾಲೇಜು ಆಡಳಿತ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳಲು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಮಚ್ಚೀಂದ್ರ ಹಾಕೆ ಸೂಚನೆಗೆ ಮಾಹೆ ವಿಶ್ವವಿದ್ಯಾಲಯ ಸ್ಪಂದಿಸಿದ್ದು. ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ವಿವಿಗೆ ಭೇಟಿ ನೀಡಿ, ಪ್ರಕರಣ ಇತ್ಯರ್ಥ ಆಗುವವರೆಗೆ ಶೈಕ್ಷಣಿಕ ಚಟುವಟಿಕೆಗೆ ಅವಕಾಶವಿಲ್ಲ. ಕಾನೂನು ವಿಚಾರಣೆ ಮುಗಿಯುವವರೆಗೆ ತರಗತಿಗಳಿಂದ ಅಮಾನತು ಮಾಡಲಾಗಿದೆ. ಶಿಕ್ಷಣಿಕ ಜೀವನ ಹಾಳುವ ಮಾಡುವ ಉದ್ದೇಶ ನಮ್ಮಲ್ಲ, ವಿದ್ಯಾರ್ಥಿ ಜೀವನದಲ್ಲಿ ಕೆಟ್ಟ ಚಟುವಟಿಕೆ ಒಳಗಾಗದಂತೆ ಕಠಿಣ ಕ್ರಮಕೈಗೊಳ್ಳಬೇಕೆಂದು ಮಾಹೆ ವಿಶ್ವವಿದ್ಯಾಲಯ ಅಡಳಿತ ಮಂಡಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಮಣಿಪಾಲ ವಿದ್ಯಾರ್ಥಿಗಳ ಹೊಸ ಮಾದರಿಯ ಡ್ರಗ್ಸ್ ಜಾಲ ಪತ್ತೆಯಾಗಿದ್ದು, LSD stips ಗಳನ್ನು ಸ್ಮಾರ್ಟ್ ವಾಚ್ ಜೊತೆಗೆ ಪಾರ್ಸೆಲ್ ಮಾಡಿ ಕಳಿಸುತ್ತಿದ್ದಾರೆ. ಆನ್ ಲೈನ್ ಮೂಲಕ ಸ್ಮಾರ್ಟ್ ವಾಚ್ ಖರೀದಿ ಮಾಡಿದಂತೆ ಬಿಂಬಿಸಲಾಗುತ್ತದೆ. ಪಾರ್ಸೆಲ್ ಮೂಲಕ ಡೆಲಿವರಿ ಮಾಡಿದಂತೆ ನಟಿಸುತ್ತಾರೆ. ಬಾಕ್ಸ್ನ ಒಳಗೆ ಕ್ರಮಬದ್ಧವಾಗಿ ಪ್ಯಾಕಿಂಗ್ ಮಾಡುತ್ತಾರೆ.
ಸ್ಮಾರ್ಟ್ ವಾಚ್ ಸ್ಟಿಕರ್ ಕೂಡ ಹಾಗೆ ಇರುತ್ತದೆ. ವಾಚ್ ಜೊತೆಗೆ ಇರುವ ಮಾಹಿತಿ ನೀಡುವ ಬುಕ್ ನೆಟ್ ಒಳಗೆ ಈ ಸ್ಡ್ರಿಪ್ಸ್ ಇಡಲಾಗುತ್ತದೆ. ಖಚಿತ ವರ್ತಮಾನದ ಮೇರೆಗೆ ಇಂತಹ ಪ್ರಕರಣವನ್ನು ಬಯಲು ಮಾಡಿದ್ದೇವೆ. ಡಿಸೆಂಬರ್ 31ರಂದು ಈ ಮಾದರಿಯ ಪ್ರಕರಣ ನಡೆದಿತ್ತು ಎಂದು ಎಸ್ಪಿ ಅಕ್ಷಯ್ ಮಚ್ಚೀಂದ್ರ ಹಾಕೆ ಹೇಳಿದರು.