ಕಾರ್ಕಳ : ಕಾರ್ಕಳ ತಾಲೂಕು ಕಸಬಾ ಗ್ರಾಮದ ತಾಲೂಕು ಆಫೀಸ್ ಜಂಕ್ಷನ್ ಬಳಿ ಒಂಟಿಯಾಗಿ ವಾಸವಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಫೆಬ್ರವರಿ 15 ರಂದು ಬೆಳಕಿಗೆ ಬಂದಿದೆ.
ನಿರ್ಮಲಾ ಪ್ರಭು (75ವ) ಮೃತಪಟ್ಟ ಮಹಿಳೆ.
ಅವರು ತಾಲೂಕು ಆಫೀಸ್ ಜಂಕ್ಷನ್ ಬಳಿ ಸುಮಾರು 35 ವರ್ಷಗಳಿಂದ ಒಬ್ಬರೇ ವಾಸವಿದ್ದರು. ಕಳೆದ 15 ದಿನಗಳಿಂದ ಅವರು ಮನೆಯಿಂದ ಹೊರಗೆ ಬಾರದೆ ಇದ್ದುದರಿಂದ ಅವರ ಸಂಬಂಧಿ ವಸಂತ ಎಂಬವರು ಫೆ.15 ರಂದು ಬಂದು ನೋಡಿದಾಗ ನಿರ್ಮಲಾ ಅವರು ಮನೆಯ ಬೆಡ್ ರೂಂ ನಲ್ಲಿ ಮಂಚದ ಕೆಳಗೆ ಮಲಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಅವರು ವಯೋಸಹಜ ಕಾರಣದಿಂದ ಅಥವಾ ಅನಾರೋಗ್ಯದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.