ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರ ಮೂರುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಏನೂ ಮಾಡದೇ ಈಗ ಹೊಸ-ಹೊಸ ಯೋಜನೆ ಘೋಷಿಸಿ ಕನ್ನಡಿಗರ ಕಿವಿ ಮೇಲೆ ಬಣ್ಣ ಬಣ್ಣದ ಹೂವು ಇಡಲು ಹೊರಟಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಕನ್ನಡಿಗರ ಕಿವಿ ಮೇಲೆ ಇಟ್ರು ಹೂವ, ಮೂರುವರೆ ವರ್ಷದಿಂದ ಅಧಿಕಾರದಲ್ಲಿದ್ದರೂ ಏನೂ ಮಾಡದೇ ಈಗ ಹೊಸ-ಹೊಸ ಯೋಜನೆ ಘೋಷಿಸಿ ಕನ್ನಡಿಗರ ಕಿವಿ ಮೇಲೆ ಬಣ್ಣ ಬಣ್ಣದ ಹೂವು ಇಡಲು ಹೊರಟಿದೆ ಎಂದು ಕಿಡಿಕಾರಿದೆ.
ನಕಲಿ ಬಿಜೆಪಿಗರು, ಈಗ ನಮ್ಮ ಗೃಹಲಕ್ಷ್ಮಿ ಯೋಜನೆಯನ್ನ ನಕಲು ಮಾಡಿ ‘ಗೃಹಿಣಿ ಶಕ್ತಿ’ ಮಾಡಿದ್ದಾರೆ! ನಮ್ಮ ಘೋಷಣೆ – ₹2000 ಬಿಜೆಪಿಯ ಘೋಷಣೆ – ಕೇವಲ ₹500 ಅದೂ ಕೂಡ ಕೃಷಿ ಕೂಲಿ ಮಹಿಳೆಯರಿಗೆ ಮಾತ್ರ. ಈಗ ಮಹಿಳೆಯರ ಕಿವಿಗೆ ಹೂವು ಇಡುತ್ತಿದ್ದೀರಲ್ಲಾ? ಮೂರು ವರ್ಷಗಳ ಹಿಂದೆಯೇ ಈ ಯೋಜನೆ ಯಾಕೆ ತರಲಿಲ್ಲ? ಎಂದು ಕಾಂಗ್ರೆಸ್ ಕುಟುಕಿದೆ.