Share this news

ದೆಹಲಿ: ಆಕ್ರಮಣಕಾರರ ಹೆಸರನ್ನು ಇಡಲಾಗಿದೆ ಎಂದು ವರದಿಯಾಗಿರುವ ಎಲ್ಲಾ ನಗರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ. 

ಅನಾಗರಿಕ ವಿದೇಶಿ ಆಕ್ರಮಣಕಾರರ’ ಹೆಸರಿನ ‘ಪ್ರಾಚೀನ ಐತಿಹಾಸಿಕ ಸಾಂಸ್ಕೃತಿಕ ಧಾರ್ಮಿಕ ಸ್ಥಳಗಳ’ ಮೂಲ ಹೆಸರುಗಳನ್ನು ಕಂಡುಹಿಡಿಯಲು ‘ಮರುನಾಮಕರಣ ಆಯೋಗ’ ಬೇಕು ಎಂದು ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ  ಅವರು ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶವನ್ನು ಪ್ರಶ್ನಿಸಿ, “ದೇಶದಲ್ಲಿ ಉದ್ವಿಗ್ನವನ್ನುಂಟು ಮಾಡುವ” ಸಮಸ್ಯೆಗಳನ್ನು ಇದು ಮತ್ತೆ ಜೀವಂತಗೊಳಿಸುತ್ತದೆ ಎಂದು ಹೇಳಿದರು

ತೀರ್ಪನ್ನು ಅಂಗೀಕರಿಸಿದ ಪೀಠ, ದೇಶದ ಇತಿಹಾಸವು ಅದರ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಕಾಡಬಾರದು ಎಂದು ಹೇಳಿದೆ. “ಹಿಂದೂಯಿಸಂ ಒಂದು ಧರ್ಮವಲ್ಲ ಆದರೆ ಒಂದು ಜೀವನ ಕ್ರಮವಾಗಿದೆ. ಹಿಂದೂಯಿಸಂ ಒಂದು ಜೀವನ ವಿಧಾನವಾಗಿದೆ. ಹಿಂದೂ ಧರ್ಮದಲ್ಲಿ ಯಾವುದೇ ಮತಾಂಧತೆ ಇಲ್ಲ. ಕೇವಲ ಅಸಂಗತತೆಯನ್ನು ಉಂಟುಮಾಡುವ ಹಿಂದಿನದನ್ನು ಕೆದಕಬೇಡಿ. ದೇಶವನ್ನು ಉದ್ವಿಗ್ನಗೊಳಿಸಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ, ವಿದೇಶಿ ಆಕ್ರಮಣಕಾರರಿಂದ “ಮರುನಾಮಕರಣಗೊಂಡ” ಪ್ರಾಚೀನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ಥಳಗಳ “ಮೂಲ” ಹೆಸರುಗಳನ್ನು ಪುನಃಸ್ಥಾಪಿಸಲು ‘ಮರುನಾಮಕರಣ ಆಯೋಗ’ವನ್ನು ರಚಿಸುವಂತೆ ಕೇಂದ್ರಕ್ಕೆ ನಿರ್ದೇಶನವನ್ನು ಕೋರಿದ್ದರು.

Leave a Reply

Your email address will not be published. Required fields are marked *