Share this news

ಚಾಮರಾಜನಗರ(ಮಾ.01): ಮುಂಬ​ರುವ ವಿಧಾ​ನ​ಸಭಾ ಚುನಾ​ವ​ಣೆ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ರಾಜ್ಯದ ನಾಲ್ಕು ಕಡೆ​ಗ​ಳಿಂದ ಆರಂಭ​ವಾ​ಗ​ಲಿ​ರುವ 8000 ಕಿ.ಮೀ. ಉದ್ದದ ಬಿಜೆಪಿ ‘ವಿಜಯ ಸಂಕಲ್ಪ ಯಾತ್ರೆ’ಯ ಮೊದಲ ರಥಕ್ಕೆ ಪಕ್ಷದ ರಾಷ್ಟಾ್ರ​ಧ್ಯಕ್ಷ ಜೆ.ಪಿ.​ನಡ್ಡಾ ಅವರು ಬುಧ​ವಾರ ಮಲೆ ಮಹ​ದೇ​ಶ್ವರ ಬೆಟ್ಟ​ದಲ್ಲಿ ಚಾಲನೆ ನೀಡ​ಲಿ​ದ್ದಾ​ರೆ.

ಮೈಸೂರು ಭಾಗದಲ್ಲಿ ಸಂಚ​ರಿ​ಸ​ಲಿ​ರುವ ಈ ಯಾತ್ರೆ​ಗೆ  ಇಂದು ಮಧ್ಯಾಹ್ನ 12ಕ್ಕೆ ಚಾಲನೆ ಸಿಗ​ಲಿ​ದೆ. ಈ ವೇಳೆ ಸ್ಥಳೀಯ ಬೇಡಗಂಪಣ ಸಮುದಾಯದವರ ಜತೆಗೆ ನಡ್ಡಾ ಅವರು ಸಂವಾದವನ್ನೂ ನಡೆ​ಸ​ಲಿ​ದ್ದಾರೆ. ಬಳಿಕ ಸಾಲೂರು ಮಠದಲ್ಲಿ ಮಧ್ಯಾಹ್ನದ ಊಟ ಮುಗಿಸಿ, ಹನೂರಿನಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮುಖ್ಯ​ಮಂತ್ರಿ ಬಸ​ವ​ರಾಜ ಬೊಮ್ಮಾಯಿ, ಮಾಜಿ ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಸೇರಿ ಪಕ್ಷದ ಹಲವು ಗಣ್ಯರು, ಸಚಿ​ವರು ಉಪ​ಸ್ಥಿ​ತ​ರಿ​ರ​ಲಿ​ದ್ದಾ​ರೆ.

Leave a Reply

Your email address will not be published. Required fields are marked *