Share this news

ಕಾರ್ಕಳ : ಕಳೆದ ಒಂದು ದಶಕದ ಕನಸು ನನಸಾಗುವ ದಿನ ಬಂದೇಬಿಟ್ಟಿದೆ. ಕಾರ್ಕಳ ವಿಧಾನಸಭಾ ಕೇತ್ರದ ಅಭಿವೃದ್ದಿಯ ದಿಕ್ಕನ್ನೇ ಬದಲಾಯಿಸಬಲ್ಲ ಮಹಾತ್ವಕಾಂಕ್ಷಿ ಜವಳಿ ಪಾರ್ಕ್ ಯೋಜನೆಗೆ ನಾಳೆ(ಶುಕ್ರವಾರ)  ಶಿಲಾನ್ಯಾಸ ನೇರವೇರಲಿದ್ದು, ಈ ಮೂಲಕ ಜವಳಿ ಪಾರ್ಕ್ ಕಾರ್ಕಳ ಕ್ಷೇತ್ರದ ಅಭಿವೃದ್ಧಿಯ ಶಕೆಗೆ ಹೊಸಭಾಷ್ಯ ಬರೆಯಲಿದೆ.

ಕಾರ್ಕಳ ವಿಧಾನಸಭಾ ಕ್ಷೇತ್ರವು ಆಮೂಲಾಗ್ರ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಜತೆಗೆ ಸ್ಥಳೀಯವಾಗಿ ಯುವಜನತೆಗೆ ಉದ್ಯೋಗ ಸೃಷ್ಟಿಯಾಗಬೇಕೆನ್ನುವ ಆಗ್ರಹದ ನಡುವೆ ಜವಳಿಪಾರ್ಕ್ ಯೋಜನೆಯು ಮಹಿಳಾ ಸಬಲೀಕರಣಕ್ಕೂ ಹೆಚ್ಚಿನ ಒತ್ತು ನೀಡಲಿದೆ. ಕಾರ್ಕಳ ತಾಲೂಕಿನ ನಿಟ್ಟೆ ಮದನಾಡು ಎಂಬಲ್ಲಿ ಅಂದಾಜು ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 20 ಎಕರೆ ವಿಸ್ತೀರ್ಣದಲ್ಲಿ ಈ ಜವಳಿ ಪಾರ್ಕ್ ಯೋಜನೆ ತಲೆ ಎತ್ತಲಿದೆ ಹಾಗೂ 2 ಸಾವಿರ ಉದ್ಯೋಗ ಸೃಷ್ಟಿಯಾಗುವ ಮೂಲಕ ಹೊಸ ದಾಖಲೆ ಬರೆಯಲಿದೆ.

ಯುವಜನತೆಗೆ ಉದ್ಯೋಗ ಸೃಷ್ಟಿ ಪ್ರಮುಖ ಗುರಿ:
ಕಾರ್ಕಳ ವಿಧಾನಸಭಾ ಕ್ಷೇತ್ರದ ಯುವಕರು ಉದ್ಯೋಗಕ್ಕಾಗಿ ಬೇರೆಡೆಗೆ ವಲಸೆ ಹೋಗುವುದನ್ನು ತಪ್ಪಿಸಲು ಕಾರ್ಕಳ ತಾಲೂಕಿಗೆ ಏನಾದರೂ ವಿಶೇಷ ಯೋಜನ ತರಬೇಕೆನ್ನುವ ಆಲೋಚನೆಯಲ್ಲಿದ್ದಾಗಲೇ ಜವಳಿ ಪಾರ್ಕ್ ಎನ್ನುವ ವಿಫುಲ ಉದ್ಯೋಗ ಸೃಷ್ಟಿಯ ಕನಸು ರೂಪುತಳೆಯಿತು. ಆರಂಭದಲ್ಲಿ ನಿವೇಶನದ ಸಮಸ್ಯೆಯಿಂದ ಈ ಯೋಜನೆ ಅನುಷ್ಠಾನಕ್ಕೆ ವಿಳಂಬವಾದರೂ, ತಾನು ಸಾಧಿಸಬೇಕೆಂಬ ಯೋಚನೆಯ ಯೋಜನೆ ಕಾರ್ಯಗತವಾಗುವವರೆಗೆ ವಿರಮಿಸುವ ಮಾತಿಲ್ಲ ಎನ್ನುವಂತೆ ಅಂದಿನ ಶಾಸಕ ಸುನಿಲ್‌ಕುಮಾರ್ ಜವಳಿ ಪಾರ್ಕ್ ಪ್ರಸ್ತಾವನೆಯ ಅನುಮೋದನೆಗಾಗಿ ಪ್ರತೀಬಾರಿ ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕುತ್ತಲೇ ಬಂದಿದ್ದರು.

ಆದರೆ ಇವರ ಪ್ರಯತ್ನಕ್ಕೆ ಅಷ್ಟೊಂದು ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ, ಸುನಿಲ್ ಕುಮಾರ್ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾದ ಬಳಿಕ ಜವಳಿ ಪಾರ್ಕ್ ಕನಸಿಗೆ ಬಲಬಂದಿತ್ತು. ಅದರಂತೆ ಸಿಎಂ ತವರು ಜಿಲ್ಲೆಯಾದ ಹಾವೇರಿಯ ಶಿಗ್ಗಾವಿ ಹಾಗೂ ಕಾರ್ಕಳ ತಾಲೂಕಿಗೆ ಜವಳಿ ಪಾಕ್ ಸ್ಥಾಪನೆಗೆ ಸಿಎಂ 2020ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಅಂದುಕೊAಡಿರುವುದನ್ನು ಸಾಧಿಸದೇ ವಿರಮಿಸುವುದಿಲ್ಲ ಎನ್ನುವ ಮಾತಿನಂತೆ ಸಚಿವ ಸುನಿಲ್ ಕುಮಾರ್ ಅವರು ಸಿಎಂ ಬೊಮ್ಮಾಯಿವರ ಮೇಲೆ ಒತ್ತಡತಂದು ಯೋಜನೆಗೆ ಮಂಜೂರಾತಿ ಪಡೆದರು.ಈ ಯೋಜನೆಯು ಸಂಪೂರ್ಣವಾಗಿ ಸಾಕಾರಗೊಂಡ ಬಳಿಕ ನೂರಾರು ಬಡಕುಟುಂಬಗಳಿಗೆ ಆಶಾಕಿರಣವಾಗಲಿದೆದಿದರ ಜತೆಗೆ ಜವಳಿಪಾರ್ಕ್ ಸ್ಥಳೀಯವಾಗಿ ವ್ಯಾಪಾರ ವಹಿವಾಟಿನ ಮೇಲೆ ಉತ್ತಮ ಪರಿಣಾಮ ಬೀರಲಿದೆ ಜತೆಗೆ ಸಹಕಾರಿ ಕ್ಷೇತ್ರದಲ್ಲಿ ಜವಳಿ ಗಿರಣಿಗಳನ್ನು ಮರಳಿ ತೆರೆಯಲು ಸಹಕಾರಿಯಾಗಲಿದೆ.


ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದೇ ಈ ಯೋಜನೆಯ ಉದ್ದೇಶ: ಸಚಿವ ಸುನಿಲ್ ಕುಮಾರ್

ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದೇ ಈ ಯೋಜನೆಯ ಉದ್ದೇಶವಾಗಿದ್ದು, ಕಳೆದ 2 ವರ್ಷಗಳಿಂದ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದಾಗಿ ಈ ಯೋಜನೆ ಅನುಷ್ಠಾನಕ್ಕೆ ಸ್ವಲ್ಪಮಟ್ಟಿನ ಹಿನ್ನಡೆಯಾಗಿತ್ತು. ಆರಂಭದಲ್ಲಿ ಮಿಯ್ಯಾರು ಅಡರಪಲೆಯಲ್ಲಿ 20 ಎಕರೆ ಜಾಗ ಗುರುತಿಸಲಾಗಿತ್ತು. ಅರಣ್ಯಸಮಸ್ಯೆ ಯಿಂದ ಹೆಬ್ರಿಯ ಚಾರ ಗ್ರಾಮದಲ್ಲಿ ಜವಳಿ ಪಾರ್ಕ್(ಟೆಕ್ಸ್ ಟೈಲ್) ಸ್ಥಾಪನೆಗೆ ಸ್ಥಳ ಗುರುತಿಸಲಾಗಿತ್ತು. ಇದೀಗ ಅಂತಿಮವಾಗಿ ನಿಟ್ಟೆ ಗ್ರಾಮದ ಮದನಾಡಿನಲ್ಲಿ 20 ಎಕರೆ ಜಾಗ ಗುರುತಿಸಲಾಗಿದ್ದು, ಮಾ.3ರಂದು ಜವಳಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *