ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ ಬೈಕ್ ಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮೂವರು ಗಾಯಗೊಂಡಿರುವ ಘಟನೆ ಮಾ.1 ರಂದು ನಡೆದಿದೆ.
ಕಿನ್ನಿಗೋಳಿ ನೆಲ್ಲಿಗುಡ್ಡೆಯ ಗಣೇಶ್ ಪ್ರಸಾದ್ ಎಂಬವರು ತಮ್ಮ ಬೈಕಿನಲ್ಲಿ ಸಂಕಲಕರಿಯ ಕಡೆಯಿಂದ ಮಂಜರಪಲಕ್ಕೆ ಕಡೆಗೆ ಹೋಗುತ್ತಿದ್ದಾಗ ಬೋಳ ಗ್ರಾಮದ ಬೋಳ ಪದವು ಎಂಬಲ್ಲಿ ಎದುರಿನಿಂದ ಬಂದ ವಿನೋದ ಎಂಬವರ ಬೈಕ್ ಡಿಕ್ಕಿಯಾಗಿದೆ. ಅಪಘಾತದ ಪರಿಣಾಮ ಗಣೇಶ್ ಪ್ರಸಾದ್, ಇನ್ನೊಂದು ಬೈಕ್ ಸವಾರ ವಿನೋದ್ ಹಾಗೂ ಸಹಸವಾರೆ ಗಾಯಗೊಂಡಿದ್ದಾರೆ.
ಈ ಕುರಿತು ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯ ಒಂದನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಚರಂಡಿಗೆ ಬಿದ್ದ ಪರಿಣಾಮ ಬಸ್ ನಲ್ಲಿದ್ದ ಏಳು ತಿಂಗಳ ಮಗು ಅಯಿಷಾ ಅಲಿಮ ಸುಲ್ತಾನ ಗಂಭೀರವಾಗಿ ಗಾಯಗೊಂಡಿದ್ದು, ಬಸ್ಸಿನಲ್ಲಿದ್ದ ಇತರ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ