Share this news

ನವದೆಹಲಿ : ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಆದ ಅಂದಾಜು ಮೂರು ತಿಂಗಳ ಬಳಿಕ ಹಾಗೂ ಕೊಯಮತ್ತೂರಿನಲ್ಲಿ ಕಾರ್‌ ಬಾಂಬ್‌ ಸ್ಫೋಟವಾದ ನಾಲ್ಕು ತಿಂಗಳ ಬಳಿಕ ಖೊರಸಾನ್‌ ಪ್ರಾಂತ್ಯದ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌ಕೆಪಿ) ತನ್ನ ಮುಖವಾಗಿ ‘ವಾಯ್ಸ್ ಆಫ್‌ ಖೊರಸಾನ್‌’ ಪತ್ರಿಕೆಯ ಮೂಲಕ ಇದು ತಾವೇ ಮಾಡಿದ ಕೃತ್ಯ ಎಂದು ಒಪ್ಪಿಕೊಂಡಿದೆ.

ತಮ್ಮ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಸಕ್ರಿಯರಾಗಿದ್ದು, ಕಳೆದ ವರ್ಷ ನಡೆದ ಎರಡು ಬ್ಲಾಸ್ಟ್‌ಗಳಲ್ಲಿ ಇವರು ಭಾಗಿಯಾಗಿದ್ದಾರೆ ಎಂದು ಬರೆದುಕೊಂಡಿದೆ. ಐಎಸ್‌ಕೆಪಿಯ ಅಲ್‌ ಅಜೀಮ್‌ ಮೀಡಿಯಾ ಫೌಂಡೇಷನ್‌ 68 ಪುಟಗಳ 23ನೇ ದೀರ್ಘ ಆವೃತ್ತಿಯಾಗಿರುವ ವಾಯ್ಸ್‌ ಆಫ್‌ ಖೊರಸಾನ್‌ಅನ್ನು ಪ್ರಕಟ ಮಾಡಿದ್ದು, ಅದರಲ್ಲಿ ಈ ವಿವರಗಳನ್ನು ದಾಖಲು ಮಾಡಿದೆ. ತನ್ನ ಕುಕೃತ್ಯಗಳು ಹಾಗೂ ಹಿಂಸಾ ಆಲೋಚನೆಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳುವ ಈ ಮ್ಯಾಗಝೀನ್‌ಅನ್ನು ಸಂಪೂರ್ಣವಾಗಿ ಇಂಗ್ಲೀಷ್‌ನಲ್ಲಿ ಪ್ರಕಟಿಸಿದೆ.

ಆದರೆ,  ಮ್ಯಾಗಜೀನ್‌ನ ಲೇಖನದಲ್ಲಿ ದಕ್ಷಿಣದ ಯಾವ ರಾಜ್ಯದಲ್ಲಿ ಅದರ ‘ಮುಜಾಹಿದ್ದೀನ್‌ಗಳು’ ಸಕ್ರಿಯವಾಗಿದ್ದಾರೆ ಎನ್ನುವುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಈಗಿರುವ ಅಂದಾಜಿನ ಪ್ರಕಾರ ಕೇರಳದಲ್ಲಿ ಇವರ ಸಂಖ್ಯೆ ಹೆಚ್ಚಾಗಿದ್ದು, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳಲ್ಲಿ ಇವರು ಕೃತ್ಯಗಳನ್ನು ಎಸಗಬಹುದು ಎನ್ನಲಾಗಿದೆ.

Leave a Reply

Your email address will not be published. Required fields are marked *