ಕಾರ್ಕಳ : ಅಭಿನಯಶ್ರೀ ಉಮೇಶ್ ಹೆಗ್ಡೆ ಕಡ್ತಲ ಅಭಿಮಾನಿ ಬಳಗದ ವತಿಯಿಂದ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಸಿರಿಬೈಲು ದೇವಸ್ಥಾನದ ವಠಾರದಲ್ಲಿ ಎರಡು ದಿನಗಳ ರಂಗ ತರಬೇತಿ ಕಾರ್ಯಾಗಾರ ನಡೆಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ದೈಹಿಕ ಹಾಗೂ ಯೋಗ ಶಿಕ್ಷಕ ಶೇಖರ್ ಕಡ್ತಲ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಂಗಭೂಮಿ ಹಾಗೂ ಸಿನಿಮಾ ನಟರಾದ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ, ವಸಂತ್ ಮುನಿಯಾಲ್, ಕಿಶೋರ್ ಶೆಟ್ಟಿ ಪಿಲಾರ್, ಕಡ್ತಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಡಾ. ಪ್ರಮೋದ್ ಕುಮಾರ್, ಹಿರಿಯರಾದ ಧರ್ಮರಾಜ ಕುದ್ರೆ ಮುಖ್ಯ ಅತಿಥಿಗಳಾಗಿದ್ದರು.
ರಂಗ ನಿರ್ದೇಶಕರಾದ ದಿವಾಕರ್ ಕಟೀಲ್, ಯೋಗೀಶ್ ಕೊಳಲಗಿರಿ ಹಾಗೂ ಡಾ ವಿಷ್ಣುಮೂರ್ತಿ ಪ್ರಭು ಸಂಪನ್ಮೂಲ ವ್ಯಕ್ತಿಗಳಾಗಿ ಸುಮಾರು 25ಕ್ಕೂ ಹೆಚ್ಚಿನ ಯುವ ಕಲಾವಿದರಿಗೆ ರಂಗಶಿಕ್ಷಣ ನೀಡಿದರು.
ಚಂದ್ರಕಾAತ್ ಹೆಗ್ಡೆ ಕಡ್ತಲ, ಸುಕೇಶ್ ಹೆಗ್ಡೆ ಕಡ್ತಲ, ಸಂಜೀವ ಪೂಜಾರಿ ಕಡ್ತಲ, ಸಿರಿಬೈಲು ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಸುರೇಶ್ ಸುವರ್ಣ, ಸಾಂಸ್ಕ್ರತಿಕ ಕಾರ್ಯದರ್ಶಿ ಹರೀಶ್ ಹೆಗ್ಡೆ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಪೂಜಾರಿ, ಪುರಂದರ ನಾಯಕ್, ರೇವತಿ ನಾಯಕ್, ಸುನೀಲ್ ಕುಮಾರ್ ಹೆಗ್ಡೆ ಉಪಸ್ಥಿತರಿದ್ದರು.
ಹರೀಶ್ ಪೂಜಾರಿ ಕಡ್ತಲ, ಸುಮನ್, ಸವಿನ್ ಸಹಕರಿಸಿದರು.