ಚಿಕ್ಕಮಗಳೂರು: ಬಾಬಾ ಬುಡನ್ ಗಿರಿ ದತ್ತಪೀಠದಲ್ಲಿ ಪೂಜಾ ವಿಧಾನ ವಿಚಾರವಾಗಿ ಸೈಯದ್‌ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಏಕಸದಸ್ಯ ಪೀಠ ಆದೇಶವನು ವಿಭಾಗೀಯ ಪೀಠ ಎತ್ತಿಹಿಡಿದಿದೆ.2018ರಲ್ಲಿ ಪೂಜೆಗೆ ಅರ್ಚಕರನ್ನು ನೇಮಿಸಲು ಸರ್ಕಾರ ನಿರಾಕರಿಸಿತ್ತು. ಮುಜಾವರ್ ಗಳಿಂದಲೇ ಧಾರ್ಮಿಕ ಆಚರಣೆಗೆ ತೀರ್ಮಾನಿಸಿತ್ತು. 2018ರಲ್ಲಿ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ಹೈಕೋರ್ಟ್ ರದ್ದು ಪಡಿಸಿತ್ತು. ಪೂಜಾ ವಿಧಾನದ ಕುರಿತು ಹೊಸದಾಗಿ ತೀರ್ಮಾನಿಸಲು ಆದೇಶಿಸಿತ್ತು.
2022 ರಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿತ್ತು. ಎರಡೂ ಧರ್ಮದ ಸಂಪ್ರದಾಯ ಪ್ರಕಾರ ಪೂಜಾವಿಧಿವಿಧಾನ ಮಾಡಲಾಗಿತ್ತು. ಮುಜಾವರ್ ಹಾಗೂ ಅರ್ಚಕರಿಂದ ಪೂಜಾವಿಧಿಗೆ ಅವಕಾಶ ನೀಡಲಾಗಿತ್ತು. ಈ ನಿರ್ಧಾರಕ್ಕೆ ಸೈಯದ್ ಗೌಸ್ ಮೊಹಿಯುದ್ದೀನ್ ಶಾ ಖಾದ್ರಿ ವಿರೋಧ ವ್ಯಕ್ತಪಡಿಸಿದ್ದರು. ಆಗಾ ಹಿಂದೂ ಸಂಘಟನೆ ಪರ ಜಗದೀಶ್ ಬಾಳಿಗಾ ವಾದಿಸಿದ್ದರು. ಇದೀಗ ಶಾ ಖಾದ್ರಿ ಮೇಲ್ಮನವಿ ಹೈಕೋರ್ಟ್ ವಜಾಗೊಳಿಸಿದೆ.