ಕಾರ್ಕಳ : ವಿಜಯನಗರದ ಅರಸರ ಕಾಲದಲ್ಲಿ ಪ್ರತಿಷ್ಠಾಪನೆಗೊಂಡಿರುವ ದೇವಿ ಎನ್ನುವ ಪ್ರತೀತಿ ಹೊಂದಿರುವ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾರ್ಚ್ 9 ರಿಂದ ಮಾರ್ಚ್ 14 ರ ವರೆಗೆ ಜರುಗಲಿದ್ದು ಆ ಪ್ರಯುಕ್ತ ಹಸಿರು ಹೊರೆಕಾಣಿಕೆ ಮೆರವಣಿಗೆಯು ಮಂಗಳವಾರ ಸಂಭ್ರಮದಲ್ಲಿ ಜರುಗಿತು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಸಚಿವ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ವಿ.ಸುನೀಲ್ ಕುಮಾರ್ ತೆಂಗಿನ ಕಾಯಿ ಒಡೆದು ಹಸಿರು ಹೊರ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಂಗೀಲು ನೃತ್ಯ ತಂಡ, ಚೆಂಡೆ ಬಳಗ, ನಾಸಿಕ್ ಬ್ಯಾಂಡ್, ಹುಲಿ ವೇಷ, ಮರ ಕಾಲಿನ ಕುಣಿತ, ಡೊಳ್ಳು ವಾದನ, ಕಹಳೆ ಸೇರಿದಂತೆ, ಭಜನಾ ತಂಡಗಳು, ಕೀಲು ಕುದುರೆ ಮುಂತಾದ ಹಲವಾರು ವಿವಿಧ ಕಲಾತಂಡಗಳು, ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.

ಬಂಡೀಮಠ ಬಸ್ಸು ನಿಲ್ದಾಣದಿಂದ ಹೊರಟ ಮೆರವಣಿಗೆ ಮೂರುಮಾರ್ಗವಾಗಿ ಕಾರ್ಕಳ ಪೇಟೆ ಮೂಲಕ ಶ್ರೀ ಮಾರಿಗುಡಿ ಕ್ಷೇತ್ರವನ್ನು ತಲುಪಿತು. ಮೆರವಣಿಗೆಯ ಉದ್ದಕ್ಕೂ ನೂರಾರು ಸ್ವಯಂಸೇವಕರು ಭಕ್ತರಿಗೆ ಮಜ್ಜಿಗೆ,ಪಾನಕ, ನೀರನ್ನು ವಿತರಿಸಿದರು.

ದೇವಿಯ ಬ್ರಹ್ಮಕಲಶೋತ್ಸವದ ಅನ್ನದಾನ ಕಾರ್ಯಕ್ಕೆ ಹರಿದುಬಂದ ಸಾಮಾಗ್ರಿಗಳಿಂದ ತುಂಬಿ ತುಳುಕಿದ ಉಗ್ರಾಣ:
ಕಾರ್ಕಳ ತಾಲೂಕಿನ 8 ಮಾಗಣೆಗೆ ಒಳಪಟ್ಟ ಕಾರ್ಕಳ ಮಾರಿಯಮ್ಮನ ಬ್ರಹ್ಮಕಲಶೋತ್ಸವಕ್ಕೆ ಕಾರ್ಕಳದ ನಾನಾ ಭಾಗಗಳಿಂದ ಹಸಿರು ಹೊರೆಕಾಣಿಕೆ ಸಾಗರದಂತೆ ಹರಿದುಬಂತು. ಕಾರ್ಕಳದ ಬಂಡೀಮಠದಿAದ ಜೋಡುರಸ್ತೆವರೆಗೆ ಹೊರೆಕಾಣಿಕೆ ಹೊತ್ತ ವಾಹನಗಳು ಸಾಲುಗಟ್ಟಿ ನಿಂತಿದ್ದು ಮೆರವಣಿಗೆಗೆ ಮರೆಗು ನೀಡಿತ್ತು. ವಾನಹಗಳು ಉಗ್ರಾಣ ತಲುಪುತ್ತಿದ್ದಂತೆಯೇ ಭಕ್ತರು ಉತ್ಸಾಹದಿಂದ ಸಾಮಾಗ್ರಿಗಳನ್ನು ಉಗ್ರಾಣದಲ್ಲಿ ದಾಸ್ತಾನು ಇರಿಸಿ ಎಲ್ಲವನ್ನೂ ಅತ್ಯಂತ ಅಚ್ಚುಕಟ್ಟಾಗಿ ಜೋಡಿಸುವ ಮೂಲಕ ಉಗ್ರಾಣವು ತುಂಬಿತುಳುಕಿದೆ

ಗಮನ ಸೆಳೆದ ಪುರಸಭೆಯ ಸ್ವಚ್ಚತಾ ತಂಡ:
ಹಸಿರು ಹೊರೆಕಾಣಿಕೆ ಸಾಗುತ್ತಿದ್ದ ದಾರಿಯಲ್ಲಿ ಕಾರ್ಕಳ ಪುರಸಭೆಯ ಪೌರಕಾರ್ಮಿಕರ ತಂಡ ಸ್ವಚ್ಚತೆಯ ಹೊಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿತ್ತು.ಮೆರವಣಿಗೆ ಹಾದಿಯಲ್ಲಿ ಬೀಳುವ ನೀರಿನ ಬಾಟಲಿ, ಮಜ್ಜಿಗೆ ಖಾಲಿ ಪ್ಯಾಕೆಟ್ಗಳನ್ನು ಸಂಗ್ರಹಿಸುವ ಮೂಲಕ ಪೌರಕಾರ್ಮಿಕರ ಕಾರ್ಯದಕ್ಷತೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು 4 ಸ್ವಚ್ಚತಾ ತಂಡಗಳ 50ಕ್ಕೂ ಮಿಕ್ಕಿ ಸ್ವಚ್ಚತಾ ಸಿಬ್ಬಂದಿಗಳು ಮೆರವಣಿಗೆ ಸಾಗುವ ಹಾದಿಯಲ್ಲಿ ಕಾರ್ಯನಿರತರಾಗಿದ್ದು ಕಂಡುಬAತು.

