ಚಿಕ್ಕೋಡಿ : ವಿಧಾನಸಭಾ ಚುನಾವಣೆ ಬೆನ್ನಲ್ಲೇ ರಾಜಕೀಯ ನಾಯಕರುಗಳ ವಾಕ್ಸಮರ ಮುಂದುವರೆದಿದೆ. ಇದೀಗ ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.
ನಿಪ್ಪಾಣಿಯಲ್ಲಿ ನಡೆದ ಬಿಜೆಪಿ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಸಿ.ಟಿ ರವಿ ‘ಸಿಂಧೂರ ಇಡುವವರು ಕಾಂಗ್ರೆಸ್ ಗೆ ಮತ ನೀಡಬಾರದು ಎಂದು ಹೇಳಿಕೆ ನೀಡಿದ್ದಾರೆ.
ಒಬ್ಬ ಮಾಜಿ ಮುಖ್ಯಮಂತ್ರಿಗೆ ಸಿಂಧೂರವನ್ನು ಕಂಡರೇ ಆಗುವುದಿಲ್ಲ, ಮಾಜಿ ಸಿಎಂಗೆ ಸಿಂಧೂರ ಕಂಡರೆ ಆಗೋಲ್ಲ, ಅವರಿಗೆ ಸಿಂಧೂರ ಹಾಗೂ ಕೇಸರಿ ಅಂದರೆ ಅಲರ್ಜಿ’ ಎಂದು ಸಿ.ಟಿ ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಂಧೂರ ಇಡುವವರು ಕಾಂಗ್ರೆಸ್ ಗೆ ಮತ ನೀಡಬಾರದು ಎಂದು ಸಿ.ಟಿ ರವಿ ಹೇಳಿಕೆ ನೀಡಿದ್ದಾರೆ