ಕಾರ್ಕಳ:ದೈವ ದೇವಸ್ಥಾನಗಳು ಜೀರ್ಣೋದ್ಧಾರಗೊಂಡಾಗ ನಾಡು ಸುಭೀಕ್ಷೆಯಿಂದ ಇರಲು ಸಾಧ್ಯ.ಬ್ರಹ್ಮಕಲಶೋತ್ಸವದಂತಹ ಧಾರ್ಮಿಕ ಕೈಂಕರ್ಯದಲ್ಲಿ ಸಮಾಜದ ಎಲ್ಲಾ ವರ್ಗದ ಭಕ್ತಾದಿಗಳು ಬಹಳ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ ಎಂದು ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಗುರುವಾರ ಕಾರ್ಕಳ ಇತಿಹಾಸಪ್ರಸಿದ್ಧ ಮಾರಿಯಮ್ಮ ದೇವರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಕಳದ ಪುರಾತನ ಕೋಟೆ ಮಾರಿಯಮ್ಮ ದೇವಿಯ ದೇವಸ್ಥಾನವು ದೇವಿಯ ಸಂಕಲ್ಪದಂತೆ ಕೇವಲ 9 ತಿಂಗಳಲ್ಲೇ ಭವ್ಯವಾಗಿ ಸುಂದರವಾಗಿ ನಿರ್ಮಾಣವಾಗಿದೆ.ದೇವಾಲಯವು ಸುಂದರವಾದ ಶಿಲ್ಪಕಲೆ ಹಾಗೂ ಅದ್ಭುತ ಮರದ ಕೆತ್ತನೆಗಳಿಂದ ಮೂಡಿಬಂದಿದೆ. ಈಗಾಗಲೇ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಿದ್ದು, ಮುಂದಿನ 4 ದಿನಗಳಲ್ಲಿ ಸಹಸ್ರಾರು ಭಕ್ತರು ಬ್ರಹ್ಮಕಲಶೋತ್ಸವ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ನಿರೀಕ್ಷೆಯಿದ್ದು ಸ್ಥಳಾವಕಾಶದ ಕೊರತೆಯ ಹಿನ್ನೆಲೆಯಲ್ಲಿ ಭಕ್ತಾದಿಗಳು ಗೊಂದಲಕ್ಕೆ ಅವಕಾಶ ಮಾಡದೇ ದೇವರ ದರ್ಶನ ಪಡೆಯವಂತೆ ಮನವಿ ಮಾಡಿದರು. ಅಲ್ಲದೇ ಈ ಕಾರ್ಯಕ್ರಮಕ್ಕೆ ಸ್ವಯಂ ಸೇವಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ರಾವ್, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಿಜಯ ಶೆಟ್ಟಿ, ಕಾಳಿಕಾಂಬ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮಚಂದ್ರ ಆಚಾರ್ಯ,ಮನ್ನಾರ ದೇವಸ್ಥಾನದ ಆಡಳಿತ ಮೊಕ್ತೇಸರ ಸದಾನಂದ,ದತ್ತಾತ್ರೇಯ ದೇವಸ್ಥಾನದ ಆಡಳಿತ ಮೊಕ್ತೇಸರ ದಿವಾಕರ ಶೆಟ್ಟಿ, ಸಾಯಿ ಮಂದಿರದ ಆಡಳಿತ ಮೊಕ್ತೇಸರ ಚಂದ್ರಹಾಸ ಸುವರ್ಣ, ರಾಘವೇಂದ್ರ ಮಠದ ಆಡಳಿತ ಮೊಕ್ತೇಸರ ರಮಣ ಆಚಾರ್, ಬಾಲಾಜಿ ಅಯ್ಯಪ್ಪ ಮಂದಿರ ಗುರುಸ್ವಾಮಿ ಬಾಲಕೃಷ್ಣ ಹೆಗ್ಡೆ,ವೀರಭದ್ರ ದೇವಸ್ಥಾನದ ಮೊಕ್ತೇಸರ ಶಿವರಾಯ ಶೆಟ್ಟಿಗಾರ್,ಮೂಡುಮಹಾಗಣಪತಿ ದೇವಸ್ಥಾನದ ಮೊಕ್ತೇಸರ ಹರೀಶ್ ಶೆಣೈ, ರವಳನಾಥ ದೇವಸ್ಥಾನದ ಮೊಕ್ತೇಸರ ಸುಧಾಕರ ಪ್ರಭು,ವೇಣುಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಸಂದೇಶ ಉಪಾಧ್ಯ, ಸಿದ್ದಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರ ವಿಘ್ನೇಶ್ ಪಾಠಕ್ ಮುಂತಾದವರು ಉಪಸ್ಥಿತರಿದ್ದರು.

ವೇದಿಕೆ ಸಮಿತಿ ಸಂಚಾಲಕ ವಸಂತ ಎನ್ ಸ್ವಾಗತಿಸಿ,ವೇದಿಕೆ ಸಮಿತಿ ಸಂಚಾಲಕಿ ಸುಲೋಚನ ವಂದಿಸಿದರು

