ಕಾರ್ಕಳ : ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶೊತ್ಸವ ಕಾರ್ಯಕ್ರಮದ 2ನೇ ದಿನವಾದ ಇಂದು ನಾಗದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ಪ್ರಧಾನ ಯಾಗ, ನಾಗದೇವರ ಪ್ರತಿಷ್ಠೆ, ತಿಲಹೋಮ, ತ್ರಿಷ್ಟುಭ ಮಂತ್ರ ಹೋಮ,ಕುಷ್ಮಾಂಡ ಹೋಮ, ಪವಮಾನ ಸೂಕ್ತ ಹೋಮ, ಆಶ್ಲೇಷಾ ಬಲಿದಾನ, ವಟು ಆರಾಧನೆ, ನಾಗದೇವರ ದರ್ಶನ ಸೇವೆ, ಪೂರ್ಣಮಾನ ನವಗ್ರಹ ಶಾಂತಿ ಸಂಜೀವಿನೀ ಮಹಾಮೃತ್ಯುಂಜಯ ಶಾಂತಿ ಹೋಮ, ಲಕ್ಷ ಕುಂಕುಮಾರ್ಚನೆ ಮೊದಲಾದ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು.

ಸಚಿನ ಸುನಿಲ್ ಕುಮಾರ್, ಪ್ರಿಯಾಂಕ ಸುನಿಲ್ ಕುಮಾರ್, ದೇವಳದ ಆಡಳಿತ ಮೋಕ್ತೇಸರ ಕೆ.ಬಿ ಗೋಪಾಲಕೃಷ್ಣ ರಾವ್ ಸೇರಿದಂತೆ ಸಾವಿರಾರು ಭಕ್ತರು ಈ ದೇವತಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.



