ಕಾರ್ಕಳ : ಮೂಡಬಿದ್ರೆ ತಾಲೂಕಿನ ಬೆಳುವಾಯಿ ಶಾಂತಿನಗರದ ಯುವಕನೊಬ್ಬ ಕಾರ್ಕಳದ ಮಿಯಾರು ಎಂಬಲ್ಲಿ ಕೆಲಸಕ್ಕೆಂದು ಬಂದಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆಗೆ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.
ಬೆಳುವಾಯಿಯ ಯುವಕ ಸತೀಶ (38ವ) ಮೃತಪಟ್ಟ ದುರ್ದೈವಿ. ಸತೀಶ್ ಶುಕ್ರವಾರ ಬೆಳಿಗ್ಗೆ ದಿವಾಕರ ಶೆಟ್ಟಿ ಎಂಬವರೊAದಿಗೆ ಕಾರ್ಕಳದ ಮಿಯಾರು ಎಂಬಲ್ಲಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮಾಡುತ್ತಿದ್ದಾಗ ಸುಮಾರು 11.30ರ ವೇಳೆಗೆ ತನಗೆ ಕೈ ಮತ್ತು ಎದೆನೋವು ಆಗುತ್ತಿದೆ ಎಂದು ಸತೀಶ್ ದಿವಾಕರ್ ಶೆಟ್ಟಿ ಬಳಿ ಹೇಳಿದ್ದರು.ಅವರು ಮಧ್ಯಾಹ್ನ 1 ಗಂಟೆಗೆ ಸತೀಶ್ ರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸತೀಶ್ ಎದೆನೋವಿನಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.