ಕಾರ್ಕಳ:ಐತಿಹಾಸಿಕ ಹಾಗೂ ಅತ್ಯಂತ ಪುರಾತನ ಕಾರ್ಕಳ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವವು ದೈವಗಳ ನೇಮೋತ್ಸವದೊಂದಿಗೆ ಸಂಪನ್ನಗೊAಡಿತು.

ಸAಪೂರ್ಣವಾಗಿ ಜೀಣೋದ್ಧಾರಗೊಂಡು 6 ದಿನಗಳ ಪರ್ಯಂತ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮಾರಿಯಮ್ಮ, ಉಚ್ಚಂಗಿ ಮಾರಿಯಮ್ಮ ಹಾಗೂ ಮುಖ್ಯಪ್ರಾಣ ದೇವರ ಬಿಂಬ ಪ್ರತಿಷ್ಠಾಪನೆ ಹಾಗೂ ಪ್ರತಿಷ್ಠಾಪೂರ್ವಕ ಬ್ರಹ್ಮಕಲಶೋತ್ಸವು ಅತ್ಯಂತ ಸಂಭ್ರಮದಿAದ ನಡೆಯಿತು.

ಮಾರಿಯಮ್ಮನ ಹಸಿರು ಹೊರೆಕಾಣಿಕೆ ಮೆರವಣಿಗೆಯಿಂದ ಆರಂಭವಾಗಿ ಬ್ರಹ್ಮಕಲಶೋತ್ಸವ ಆದಿಯಾಗಿ ನೇಮೋತ್ಸವದವರೆಗೂ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ನಿರ್ವಿಘ್ನವಾಗಿ ಜರುಗಿತು. ದೇವಿಯ ಸನ್ನಿಧಿಯಲ್ಲಿ ಕಾರ್ಕಳ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸ್ವಯಂಸೇವಕರು ತಮಗೆ ವಹಿಸಿದ ಜವಾಬ್ದಾರಿಯನ್ನು ಭಕ್ತಿ,ನಿಷ್ಠೆ ಹಾಗೂ ಶ್ರದ್ದಾಪೂರ್ವಕವಾಗಿ ನಿರ್ವಹಿಸಿ ಮಾರಿಯಮ್ಮನ ಅನುಗ್ರಹಕ್ಕೆ ಪಾತ್ರರಾದರು.

ಸ್ವಚ್ಚತೆಯಲ್ಲೂ ಅಚ್ಚುಕಟ್ಟು ವ್ಯವಸ್ಥೆ:
ಸಾಮಾನ್ಯವಾಗಿ ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಭಕ್ತರು ಸೇರುವ ಹಿನ್ನಲೆಯಲ್ಲಿ ಸ್ವಚ್ಚತೆಯ ನಿರ್ವಹಣೆ ಅಷ್ಟು ಸುಲಭದ ಮಾತಲ್ಲ,ಕಸ ಹಾಗೂ ತ್ಯಾಜ್ಯ ವಿಲೇವಾರಿ ಅತ್ಯಂತ ಸವಾಲಿನ ಕೆಲಸ, ಆದರೆ ಕಾರ್ಕಳ ಮಾರಿಯಮ್ಮ ಬ್ರಹ್ಮಕಲಶೋತ್ಸವದ ಕಾರ್ಯಕ್ರಮದಲ್ಲಿ ಸ್ವಚ್ಚತೆ ಅತ್ಯಂತ ಅಚ್ಚುಕಟ್ಟಾಗಿತ್ತು.ಕಾರ್ಕಳ ಪುರಸಭೆಯ ಸ್ವಚ್ಚತಾ ತಂಡದ ಜತೆಗೆ ಸಮಿತಿಯ ಸಂಚಾಲಕರಾಗಿ ಯೋಗೀಶ್ ದೇವಾಡಿಗ ನೇತೃತ್ವದ ಸ್ವಚ್ಚತಾ ತಂಡ ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸಿದೆ.ಇದರ ಜತೆಗೆ ನಿಟ್ಟೆಯ ನೀಲಾಧರ ಎಂಬ ವಿಕಲಚೇತನ ವ್ಯಕ್ತಿಯೊಬ್ಬರು ತನ್ನ ಸ್ವಂತ ವಾಹನ ಬಳಸಿ ಊಟದ ವಿಭಾಗದಲ್ಲಿ ಸುತ್ತಾಡುತ್ತಾ ಕಸವನ್ನು ಸಂಗ್ರಹಿಸುವ ಮೂಲಕ ಮಾರಿಯಮ್ಮನ ಸೇವೆಯ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
1.50 ಲಕ್ಷ ಮಂದಿಗೆ ಅನ್ನದಾಸೋಹ
ಬ್ರಹ್ಮಕಲಶೋತ್ಸವ ಎಂದರೆ ಅತ್ಯಂತ ಪ್ರಧಾನವಾಗಿರುವುದು ಅನ್ನದಾಸೋಹ, ಹಸಿದುಬಂದ ಭಕ್ತರು ದೇವಿಯ ಪ್ರಸಾದ ರೂಪದ ಭೋಜನವನ್ನು ಸ್ವೀಕರಿಸಿದಾಗಲೇ ದೇವಿಯ ಬ್ರಹ್ಮಕಲಶೋತ್ಸವವು ಪರಿಪೂರ್ಣವಾಗುತ್ತದೆ.6 ದಿನಗಳ ದೇವಿಯ ಬ್ರಹ್ಮಕಲಶೋತ್ಸವ ವೈಭವದಲ್ಲಿ ಸುಮಾರು 1.50 ಲಕ್ಷಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದವನ್ನು ಸ್ವೀಕರಿಸುವ ಮೂಲಕ ದೇವಿಯು ಪ್ರಸನ್ನಳಾಗಿದ್ದಾಳೆ.

ಉತ್ಸವ ಮುಗಿದರೂ ಖಾಲಿಯಾಗದ ಉಗ್ರಾಣ!
ದೇವಸ್ಥಾನಗಳ ಬ್ರಹ್ಮಕಲಶೋತ್ಸವ ಎಂದರೆ ಭಕ್ತರು ಭಕ್ತಿಭಾವದಿಂದ ಹೊರೆಕಾಣಿಕೆ ಸಮರ್ಪಿಸುತ್ತಾರೆ.ಬಹುತೇಕ ದೇವಸ್ಥಾನಗಳಲ್ಲಿ ಉತ್ಸವ ಮುಗಿಯುವ ವೇಳೆ ದವಸ,ಧಾನ್ಯಗಳ ಉಗ್ರಾಣವೂ ಖಾಲಿಯಾಗುತ್ತದೆ. ಆದರೆ ಕಾರ್ಕಳ ಮಾರಿಯಮ್ಮನ ದೇವಿಯ ಉಗ್ರಾಣ ಮಾತ್ರ ಅಕ್ಷಯಪಾತ್ರೆಯಂತಾಗಿದೆ. ದಿನಕ್ಕೆ ಸಾವಿರಾರು ಭಕ್ತರಿಗೆ ಉಪಹಾರ, ಭೋಜನ,ಪಾನೀಯದ ವ್ಯವಸ್ಥೆ ಮಾಡಿದರೂ ಉಗ್ರಾಣ ಮಾತ್ರ ಬರಿದಾಗಲೇ ಇಲ್ಲ, ಹೊರೆಕಾಣಿಕೆಯಿಂದ ತುಂಬಿತುಳುಕುತ್ತಿದ್ದ ಉಗ್ರಾಣಕ್ಕೆ ನಿತ್ಯವೂ ಭಕ್ತರಿಂದ ವಿವಿಧ ರೂಪದ ಕಾಣಿಕೆಗಳು ಬರುತ್ತಲೇ ಇತ್ತು. ಅಕ್ಕಿ,ಬೇಳೆ, ಬೆಲ್ಲ, ತೆಂಗಿನ ಕಾಯಿ, ತರಕಾರಿ ಎಲ್ಲವೂ ನಿಧಿಯಂತೆ ಸಂಗ್ರವಾಗಿರುವುದು ದೇವಿಯ ಕಾರಣೀಕಕ್ಕೆ ಸಾಕ್ಷಿಯಾಗಿದೆ.
8 ಮಾಗಣೆಗೆ ಒಳಪಟ್ಟ ಕಾರ್ಕಳದ ಕೋಟೆ ಮಾರಿಯಮ್ಮ ದೇವಸ್ಥಾನವು ಅತ್ಯಂತ ಕಾರಣೀಕ ಕ್ಷೇತ್ರವೂ ಹೌದು.ಸುಮಾರು 800 ವರ್ಷಗಳಷ್ಟು ಹಳೆಯದಾದ ದೇವಸ್ಥಾನವನ್ನು ಮಾರಿಯಮ್ಮನ ಇಚ್ಚೆಯಂತೆ 19 ಕೋಟಿ ರೂ ವೆಚ್ಚದಲ್ಲಿ ಕೇವಲ ತಿಂಗಳೊಳಗೆ ಜೀರ್ಣೋದ್ದಾರ ಮಾಡಿ ಅಷ್ಟೇ ಅಚ್ಚುಕಟ್ಟಾಗಿ ಒಂದಿನಿತೂ ಲೋಪವಿಲ್ಲದೇ ಬ್ರಹ್ಮಕಲಶೋತ್ಸವವು ನೆರವೇರಿದೆ

