ಬೆಂಗಳೂರು : ಈ ಬಾರಿ ಅವಧಿಗೂ ಮುನ್ನವೇ ಕರ್ನಾಟಕದಲ್ಲಿ ಮುಂಗಾರು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ಹಲವು ಕಡೆ ಅವಧಿ ಮುನ್ನವೇ ಮುಂಗಾರು ಮಳೆಯಾಗಲಿದೆ. ದೇಶದ ಹಲವು ಕಡೆ ಕೂಡ ಅವಧಿಗೆ ಮುನ್ನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಾರ್ಚ್ 16 ರಿಂದ 22 ರ ತನಕ ದೇಶದ ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ. ಮಳೆ ಬಿರುಗಾಳಿ ಸಹಿತ ಸುರಿಯಲಿದೆ ಎಂದಿದ್ದಾರೆ.
ಫೆಬ್ರವರಿ, ಮಾರ್ಚ್ ನಲ್ಲಿ ಅತಿ ಹೆಚ್ಚು ಬಿಸಿಲಿನ ಉಷ್ಣಾಂಶವಿದ್ದು, ಇದು 1901ರ ಬಳಿಕ ಇದೇ ಮೊದಲು ಎನ್ನಲಾಗಿದೆ. ಈ ಬದಲಾವಣೆ ಹಿನ್ನೆಲೆ ಅವಧಿ ಪೂರ್ವ ಮುಂಗಾರಿಗೆ ಕಾರಣವಾಗಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಮಾಹಿತಿ ನೀಡಿದ್ದಾರೆ. ಮಾರ್ಚ್ 16ರಿಂದ 22ರ ತನಕ ದೇಶದ ದಕ್ಷಿಣ ಭಾಗದಲ್ಲಿ ಮಳೆಯಾಗಲಿದೆ. ಈ ಮಳೆ ಬಿರುಗಾಳಿ ಸಹಿತ ಸುರಿಯಲಿದೆ ಎಂದಿದ್ದಾರೆ.