Share this news

ಕಾರ್ಕಳ : ಕಾರ್ಕಳ ಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಂಗಳವಾರ ಸಂಪನ್ನಗೊಂಡಿತು. ದೇವಿಯ ಬ್ರಹ್ಮಕಲಶೋತ್ಸವಕ್ಕಾಗಿ ಭಕ್ತಾದಿಗಳಿಂದ ಭಾರೀ ಪ್ರಮಾಣದಲ್ಲಿ ಹೊರೆ ಕಾಣಿಕೆಯು ದೇವಳಕ್ಕೆ ಸಲ್ಲಿಕೆಯಾಗಿತ್ತು .

ಇದೀಗ ಬ್ರಹ್ಮಕಲಶೋತ್ಸವವು ಸಂಪನ್ನಗೊಂಡಿದ್ದು ಹೊರೆ ಕಾಣಿಕೆಯಲ್ಲಿ ಉಳಿದ ಆಹಾರ ಸಾಮಗ್ರಿಗಳನ್ನು ವಿವಿಧ ಶಾಲೆಗಳು ಹಾಗೂ ಅನಾಥಾಶ್ರಮಗಳಿಗೆ ಹಸ್ತಾಂತರಿಸಲಾಗಿದೆ .
ಉಡುಪಿ ಜಿಲ್ಲೆಯ ಐದು ವಿಶೇಷ ಶಾಲೆಗಳು ಹಾಗೂ 10 ಅನಾಥಾಶ್ರಮಗಳಿಗೆ ತಲಾ 300 ಕೆಜಿ ಅಕ್ಕಿ, 25 ಕೆಜಿ ಬೆಲ್ಲ, ತರಕಾರಿ ಹಾಗೂ ಅಡುಗೆ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *