ಕಾರ್ಕಳ: ನಕ್ಸಲ್ ನಿಗ್ರಹ ಪಡೆ, ಶ್ರೀ 48 ಪಟ್ಟಿ ಪೊರವಾಲ್ ಜೈನ ಸಂಘ ಹಾಗೂ ಶ್ರೀ 48 ಪಟ್ಟಿ ಪೊರವಾಲ್ ಜೈನ ಯುವ ಮಂಡಲ ಬೆಂಗಳೂರು ಇದರ ಸಹಯೋಗದಲ್ಲಿ ನಕ್ಸಲ್ ಪೀಡಿತ ಶಾಲೆಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು..
ಉಡುಪಿ ಜಿಲ್ಲೆಯ ಸೋಮೇಶ್ವರ, ಕಾಸನಮಕ್ಕಿ, ಸೀತಾನದಿ, ನಾಡ್ಪಾಲು , ಮೇಗದ್ದೆ, ಕೊಂಕಣರಾಬೆಟ್ಟು, ಮೇಲ್ಮಠ ಹಾಗೂ ಕುಕ್ಕಂದೂರಿನ ವಿಜೇತ ವಿಶೇಷ ಮಕ್ಕಳ ಶಾಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ, ಮೇಲ್ ನೆಮ್ಮರ್, ನೆಮ್ಮರ್ ಆಶ್ರಮ ಶಾಲೆ, ಗಂಡಘಟ್ಟ, ಸಿಂದೋಡಿ, ಸಿರಿಮನೆ ಸೇರಿದಂತೆ 17 ಶಾಲೆಗಳಿಗೆ 852 ವಿದ್ಯಾರ್ಥಿಗಳಿಗೆ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಪ್ರತಿಯೊಂದು ವಿದ್ಯಾರ್ಥಿಗೂ ಸ್ಕೂಲ್ ಬ್ಯಾಗ್, ಪುಸ್ತಕ, ಜಮೆಟ್ರಿ ಬಾಕ್ಸ್, ಪೆನ್, ಪೆನ್ಸಿಲ್, ಸ್ಕೇಲ್, ಚಾಕಲೇಟ್ ಹಾಗೂ ಪ್ರತಿಯೊಂದು ಶಾಲೆಗಳಿಗೆ ಕ್ರಿಕೆಟ್ ಬ್ಯಾಟ್ ಮತ್ತು ಬಾಲ್, ಶಟಲ್ ಬ್ಯಾಟ್, ಕ್ಯಾರಂ ಬೋರ್ಡ್, ಚೆಸ್ ಬೋರ್ಡ್, ಲೂಡೋ ಬೋರ್ಡ್, ರಿಂಗ್, ಸ್ಕಿಪಿಂಗ್, ವಾಲಿಬಾಲ್, ಫುಟ್ಬಾಲ್, ಡಂಬೆಲ್ಸ್ ಹಾಗೂ ಇತರೇ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.
ನಕ್ಸಲ್ ನಿಗ್ರಹ ಪಡೆಯ ಮಾನ್ಯ ಪೊಲೀಸ್ ಅಧೀಕ್ಷಕ ಪ್ರಕಾಶ್ ನಿಕಂ ಐಪಿಎಸ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಜೈನ ಸಂಘ ಹಾಗೂ ಜೈನ ಯುವ ಮಂಡಲದ ಪದಾಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ಪಡೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು
