ಕಾರ್ಕಳ: ಬೈಕಿನಲ್ಲಿ ತನ್ನ ಪಾಡಿಗೆ ತಾನು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಅತಿವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ ಎದುರಿನಿಂದ ಹೋಗುತ್ತಿದ್ದ ಬೈಕ್ ಪಲ್ಟಿಯಾಗಿ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಗುರುವಾರ ಹೆಬ್ರಿ ತಾಲೂಕಿನ ಮುನಿಯಾಲು ಎಂಬಲ್ಲಿ ಸಂಭವಿಸಿದೆ.
ವರಂಗ ಗ್ರಾಮದ ಮಾತಿಬೆಟ್ಟು ನಿವಾಸಿ ಯೋಗೀಶ್ ಪೂಜಾರಿ(34) ಎಂಬವರು ಗುರುವಾರ ಸಂಜೆ7.15 ರ ವೇಳೆಗೆ ಮುನಿಯಾಲು ಕೆಳಪೇಟೆಯಲ್ಲಿ ಅಜೆಕಾರು ಕಡೆಗೆ ಹೋಗುತ್ತಿರುವ ವೇಳೆ ಮುನಿಯಾಲು ಕಡೆಯಿಂದ ಅತಿವೇಗವಾಗಿ ತನ್ನ ಬೈಕ್ ಚಲಾಯಿಸಿಕೊಂಡು ಬಂದ ಅಪರಿಚಿತ ಬೈಕ್ ಸವಾರ ಯೋಗೀಶ್ ಚಲಾಯಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದು ಅಪಘಾತವೆಸಗಿ ಬೈಕಿನೊಂದಿಗೆ ಪರಾರಿಯಾಗಿದ್ದಾನೆ.