ಕಾರ್ಕಳ : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯವಾದ ಶ್ರೀರಾಮಚಂದ್ರರ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಮೂರ್ತಿಗೆ ಕಾರ್ಕಳದ ಈದು ಗ್ರಾಮದ ತುಂಗ ಪೂಜಾರಿಯವರ ಭೂಮಿಯಲ್ಲಿದ್ದ ಶಿಲೆ ಆಯ್ಕೆಯಾಗಿದೆ.ಈ ಮೂಲಕ ಶಿಲ್ಪಗಳ ತವರೂರು ಎಂದೇ ಖ್ಯಾತ ಪಡೆದಿರುವ ಕಾರ್ಕಳಕ್ಕೆ ಇದೀಗ ಮತ್ತೊಂದು ಕೀರ್ತಿ ಬಂದಿದೆ.

ನೇಪಾಳದಿAದ ಬಂದ ಸಾಲಿಗ್ರಾಮ ಶಿಲೆಗೆ ರಾಮನಾಗಲು ಯೋಗ ಕೂಡಿಬಂದಿರದ ಕಾರಣ ಅಮರಶಿಲ್ಪಿ ಬೀರ ಕಲ್ಕುಡನ ಪಾದ ಸ್ಪರ್ಶದಿಂದ ಪುನೀತವಾಗಿ ಶಿಲ್ಪಗಳ ತವರು ಎಂದು ಖ್ಯಾತಿ ಪಡೆದಿರುವ ಕಾರ್ಕಳದ ಊರಿನ ಕೃಷ್ಣ ಶಿಲೆಗೆ ರಾಮನಾಗುವ ಯೋಗ ಒಲಿದು ಬಂದಿದೆ.

ಅಯೋಧ್ಯೆಯಲ್ಲಿ ಭರದಿಂದ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಾಲಲ್ಲಾನ ಮೂರ್ತಿಗೆ ಕಾರ್ಕಳದಿಂದ ಒಯ್ಯಲಾಗುತ್ತಿರುವ ಕೃಷ್ಣಶಿಲೆಯ ಯಾತ್ರೆಯಲ್ಲಿ ಕಾರ್ಕಳ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಕೈಜೋಡಿಸಿದ್ದಾರೆ .

