ಕಾರ್ಕಳ : ಉಡುಪಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ವಿಭಾಗದ ವತಿಯಿಂದ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.

ಮಂಗಳೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ ಸೈಮನ್, ಉಡುಪಿ ವಿಭಾಗದ ಪೊಲೀಸ್ ನಿರೀಕ್ಷಕ ರಫೀಕ್ ಎಂ., ಕಾರ್ಕಳ ತಹಶೀಲ್ದಾರ್ ಬಿ. ಅನಂತಶಂಕರ್, ಎ.ಡಿ.ಎಲ್.ಆರ್ ಶ್ರೀಕಲಾ, ಶಿರಸ್ತೆದಾರ್ ಲಕ್ಷ್ಮೀ, ಪುರಸಭೆ ಮುಖ್ಯಾಧಿಕಾರಿ ರೂಪ, ಮೆಸ್ಕಾಂ ಸಹಾಯಕ ಅಭಿಯಂತರ ಸಚಿನ್ ಆಚಾರ್ಯ, ತಾಲೂಕು ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್, ತಾಲೂಕು ಕಚೇರಿಯ ಎಫ್. ಡಿ ಎ .ತಾರೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರಿಂದ ಒಟ್ಟು 5 ಅಹವಾಲು ಸ್ವೀಕೃತವಾಗಿದ್ದು ಅವುಗಳಲ್ಲಿ ನಾಲ್ಕನ್ನು ಸ್ಥಳದಲ್ಲಿ ಇತ್ಯರ್ಥಪಡಿಸಿ ಒಂದು ದೂರಿಗೆ ಸಂಬಂಧಿಸಿದಂತೆ ಪ್ರಪತ್ರ 1 ಮತ್ತು 2 ನ್ನು ನೀಡಲಾಯಿತು.

