Share this news

ಉಡುಪಿ:ಹಿಂದಿನ ಕಾಲದಲ್ಲಿ ವ್ಯಕ್ತಿ ತಪ್ಪು ಮಾಡಿ ಜೈಲಿಗೆ ಹೋದಾಗ ಅವನನ್ನು ಸಮಾಜ ಬಹಿಷ್ಕಾರ ಹಾಕುತ್ತಿತ್ತು ಯಾಕೆಂದರೆ ಆತನಿಗೆ ನ್ಯಾಯಾಂಗದ ಶಿಕ್ಷೆಯಾಗಿರಲಿಲ್ಲ ಅದು ಸಮಾಜದ ಶಿಕ್ಷೆಯಾಗಿತ್ತು, ಆದರೆ ಇಂದಿನ ಸಮಾಜದಲ್ಲಿ ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ವ್ಯವಸ್ಥೆಯಿದೆ.ಇದರಿಂದ ಆರೋಪದ ಮೇಲೆ ಜೈಲಿಗೆ ಹೋದವರು ಪ್ರಕರಣ ಇತ್ಯರ್ಥವಾಗದೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾದರೂ ಅವರನ್ನು ಸ್ವಾಗತಿಸುವ ಪರಂಪರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಇಂತಹ ವ್ಯವಸ್ಥೆಯ ವಿರುದ್ಧ ಪ್ರಜಾಪ್ರಭುತ್ವದ 4 ನೇ ಅಂಗವಾಗಿರುವ ಪತ್ರಕರ್ತರು ಧ್ವನಿ ಎತ್ತಬೇಕಾಗಿದೆ ಎಂದು ನಿವೃತ್ತ ಲೋಕಾಯುಕ್ತ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.


ಅವರು ಭಾನುವಾರ ಉಡುಪಿ ಎಂಜಿಎಂ ಕಾಲೇಜು ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗಿಂತ ರಾಜಕಾರಣಿಗಳ ಹಣದ ದುರಾಸೆ,ಅಧಿಕಾರದ ಲಾಲಸೆ ಹೆಚ್ಚಾಗಿದೆ. 1950ರ ದಶಕದಲ್ಲಿ ಜೀಪ್ ಹಗರಣದಿಂದ ದೇಶಕ್ಕೆ 52 ಲಕ್ಷ ನಷ್ಟ, ಬೋರ್ಪೋಸ್ ಹಗರಣದಿಂದ 64 ಕೋಟಿ , ಕಾಮನ್‌ವೆಲ್ತ್ ಗೇಮ್ಸ್ 70 ಸಾವಿರ ಕೋಟಿ ನಷ್ಟ, 2ಜಿ ತರಂಗಾಂತರ ಹಂಚಿಕೆಯಲ್ಲಿ 1,86,000 ಕೋಟಿ, ಕಲ್ಲಿದ್ದಲು ಹಗರಣದಿಂದ 1,90,000 ಕೋಟಿ ಹಗರಣದಿಂದ ಅಧಿಕಾರಿಗಳು ಹಾಗೂ ರಾಜಕಾರಣಿಗಳು ದೇಶದ ಹಣವನ್ನು ಕೊಳ್ಳೆಹೊಡೆದ ಪರಿಣಾಮ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಸಮಾಜದಲ್ಲಿ ಶ್ರೀಮಂತಿಕೆ, ಅಧಿಕಾರದಲ್ಲಿ ಇರುವವರನ್ನು ಮಾತ್ರ ಗೌರವಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ.ಮನುಷ್ಯನಿಗೆ ತೃಪ್ತಿ ಇದ್ದರೆ ದುರಾಸೆ ಇರುವುದಿಲ್ಲ, ಆದರೆ ದುರಾಸೆಯಿಂದ ತೃಪ್ತಿ ಹೊಂದುವುದು ಅಸಾಧ್ಯ.ನಾವು ಸರಿಯಾದ ದಾರಿಯಲ್ಲಿ ಬೇಕಾದಷ್ಟು ಸಂಪಾದನೆ ಮಾಡೋಣ ಆದರೆ ಜೀವನಪಥದಲ್ಲಿ ಮಾನವನಾಗಿ ಬದುಕಿ, ಮಾನವೀಯತೆ ಬೆಳೆಸಿಕೊಳ್ಳೋಣ ಎಂದರು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕರ್ನಾಟಕ ಅಜ್ಜಮಾಡ ರಮೇಶ್ ಕುಟ್ಟಪ್ಪ,ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕ ಉಪಾಧ್ಯಕ್ಷ ಎಎಸ್ಸೆನ್, ಅರುಣ್ ಕುಮಾರ್ ಶೀರೂರು, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಜತ ಮಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಶರೀಫ್, ಕಾರ್ಯದರ್ಶಿ ಜಯಕರ ಸುವರ್ಣ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ,
ಪತ್ರಕರ್ತರ ಸಂಘದ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು.

Leave a Reply

Your email address will not be published. Required fields are marked *