ಕಾರ್ಕಳ: ಕಾರ್ಕಳದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ನಡೆದಿರುವ ಭ್ರಷ್ಟಾಚಾರದ ವಿವರಗಳನ್ನು ದಾಖಲೆ ಸಹಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಲಾಗುವುದೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಹೇಳಿದರು. ಅವರು ಶುಕ್ರವಾರ ಪರಪು ಚುನಾವಣಾ ಕಚೇರಿ ಪಾಂಚಜನ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಾರ್ಕಳದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ತಾನು ತಿನ್ನುವುದಿಲ್ಲ ತಿನ್ನಲು ಬಿಡುವುದಿಲ್ಲ ಎಂದು ಹೇಳಿರುವ ಪ್ರಧಾನಿ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಅವರ ಹೆಸರು ಹೇಳಿ ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಿ ಕೋಟಿ ಕೋಟಿ ಲೂಟಿ ಮಾಡುವ ಮೂಲಕ ನರೇಂದ್ರ ಮೋದಿಯವರ ಹೆಸರಿಗೆ ಮಸಿ ಬಳಿಯುತಿದ್ದಾರೆ ಎಂದು ಮುತಾಲಿಕ್ ಗಂಭೀರ ಆರೋಪ ಮಾಡಿದರು.ಈಗಾಗಲೇ 2 ಭ್ರಷ್ಟಾಚಾರದ ದಾಖಲೆಗಳನ್ನು ಬಿಡುಗಡೆ ಮಾಡಿ ಲೋಕಾಯುಕ್ತದಲ್ಲೂ ದೂರು ದಾಖಲಿಸಲಾಗಿದೆ.ಆದರೆ ಲೋಕಾಯುಕ್ತ ತನಿಖೆಯ ಹಂತದ ಮಾಹಿತಿ ನೀಡುತ್ತಿಲ್ಲ. ಈ ನಡುವೆ ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಣಜಾರು ಗ್ರಾಮದ ಪೊಟ್ಟುಕೆರೆಯನ್ನು ಕುಡಿಯುವ ನೀರು ಹಾಗೂ ಇನ್ನಿತರ ಉಪಯೊಗಕ್ಕಾಗಿ 10 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವುದಾಗಿ ಸುಳ್ಳು ಲೆಕ್ಕ ತೋರಿಸಿದ್ದಾರೆ, ಆದರೆ ಇಲ್ಲಿ 10 ಸಾವಿರದ ಕಾಮಗಾರಿಯೂ ನಡೆದಿಲ್ಲ, ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ಹಣ ವ್ಯಯವಾಗಿದೆ. ಅಭಿವೃದ್ಧಿಗೆ ಯೊಗ್ಯವಲ್ಲದ ಕೆರೆಗೆ ಇದೀಗ ಮತ್ತೆ 15 ಲಕ್ಷ ಈ ಕೆರೆ ಅಭಿವೃದ್ಧಿಗೆ ಬೇಡಿಕೆ ಇಟ್ಟಿದ್ದು ಯಾಕೆ ಇದು ಭ್ರಷ್ಟಾಚಾರವಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಕಣಜಾರಿನ ಜಡ್ಡಿನಕಟ್ಟ ಕೆರೆಯನ್ನು ಅಭಿವೃದ್ಧಿಗೊಳಿಸದೇ ಅಲ್ಲಿ ಕಾನೂನು ಬಹಿರವಾಗಿ ಕ್ರಶರನ್ನು ಆರಂಭಿಸಿ ಪುರತನ ಕೆರೆಯನ್ನು ಮುಚ್ಚಲಾಗಿದೆ, ಈ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದರೆ ಈ ಭಾಗಕ್ಕೆ ಕುಡಿಯುವ ನೀರಿಗೆ ವ್ಯವಸ್ಥೆಯಾಗುತ್ತಿತ್ತು. ಈ ಕೆರೆಯ ಅಭಿವೃದ್ಧಿ ಅಗತ್ಯತೆಯು ಇದೆ ಎಂದರು. ಇಲ್ಲಿ ಕಾರ್ಯಚರಿಸುತ್ತಿದ್ದ ಕ್ರಶರನ್ನು ನಿರಂತರ ಹೋರಾಟದಿಂದ ನಿಲ್ಲಿಸಲಾಗಿದೆ.ಅಕ್ರಮವಾಗಿ ನಡೆಸುತ್ತಿದ್ದ ಗಣಿಗಾರಿಕೆಯ ವಿರುದ್ಧ ಕಾರ್ಯಚರಣೆ ಮಾಡಿದಕ್ಕೆ ಕಾರ್ಕಳದ ಶಿರಸ್ತೇದಾರ್ ಹರಿಪ್ರಸಾದ್ರವರನ್ನು ನಿಯಮಬಾಹಿರವಾಗಿ ವರ್ಗವಣೆ ಮಾಡಲಾಗಿದೆ. ಈ ಅಕ್ರಮ ಗಣಿಗಾರಿಕೆ ವಿರುದ್ಧ ಲೋಕಯುಕ್ತದಲ್ಲಿ ದೂರು ದಾಖಲಿಸಲಾಗಿದೆ ಎಂದರು.ಕ್ರಶರ್ನ ಧೂಳಿನಿಂದ ಹಲವರು ಖಾಯಲೆಗೆ ತುತ್ತ್ತಾಗಿದ್ದು ಹಲವಾರು ದನಗಳು ಸತ್ತಿವೆ. ಹೋರಾಟದ ಫಲವಾಗಿ ಕ್ರಶರ್ ಸ್ಥಗಿತಗೊಂಡ ಪರಿಣಾಮ ಸ್ಥಳೀಯ ಹಲವಾರು ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ ಎಂದರು. ಆದರೆ ಇಲ್ಲಿ ಸ್ಥಗಿತಗೊಂಡ ಕ್ರಶರ್ ಮತ್ತೆ ಆರಂಭಗೊಳ್ಳುವ ಮುನ್ಸೂಚನೆ ಸಿಕ್ಕಿದ್ದು ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು. ನೀರೆ ಪಂಚಾಯತ್ ವ್ಯಾಪ್ತಿಯ ಕಣಂಜಾರು ಭಾಗದಲ್ಲಿ ಕೇಂದ್ರ ಸರಕಾರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ 80 ಮನೆಗಳಿಗೆ ನೀರಿನ ಸಂಪರ್ಕ ನೀಡಿ ರೂ.35 ಲಕ್ಷ ಬಿಲ್ ಮಾಡಲಾಗಿದೆ. ಆದರೆ ಕೇವಲ 25 ಮನೆಗಳಿಗೆ ಮಾತ್ರ ಸಂರ್ಪಕ ಮಾಡಲಾಗಿದೆ ಇಲ್ಲೂ ಭ್ರಷ್ಟಚಾರ ಎದ್ದು ಕಾಣುತ್ತಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗದ ಅಧ್ಯಕ್ಷ ನ್ಯಾಯವಾದಿ ಹರೀಶ್ ಅಧಿಕಾರಿ, ಮಹಿಳಾ ಬಳಗದ ಅಧ್ಯಕ್ಷೆ ದಿವ್ಯಾ ನಾಯಕ್ ಉಪಸ್ಥಿತರಿದ್ದರು