Share this news

ಬೆಂಗಳೂರು : ರಾಜ್ಯದಲ್ಲಿ ಬರೋಬ್ಬರಿ 1645 ಅನಧಿಕೃತ ಶಾಲೆಗಳು ತಲೆ ಎತ್ತಿದ್ದು, ಕೆಲ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕದ್ದು ಮುಚ್ಚಿ ಕ್ಲಾಸ್‌ನಲ್ಲಿ CBSE, ICSE ಪಠ್ಯ ಬೋಧಿಸುತ್ತಿದ್ದರೆ, ಮತ್ತೆ ಕೆಲವು ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೆ ಶಾಲೆ ನಡೆಸುತ್ತಿವೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದು ಪೋಷಕರು ಹಗಲಿರಳು ಕಷ್ಟಪಟ್ಟು ದುಡಿದು ಲಕ್ಷಗಟ್ಟಲೆ ಶುಲ್ಕ ಕಟ್ಟಿ ಓದಿಸುತ್ತಾರೆ. ಆದರೆ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಕಳ್ಳಾಟಕ್ಕೆ ಮುಂದಾಗಿವೆ. ಹೀಗಾಗಿ ರಾಜ್ಯದಲ್ಲಿ ತಲೆ ಎತ್ತಿರುವ ಸಾವಿರಾರು ಅನಧಿಕೃತ ಶಾಲೆಗಳಿಗೆ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ಕೊಟ್ಟಿದೆ.

ಸಿಟಿಯಲ್ಲಿ ಆರ್ಕಿಡ್ ಶಾಲೆಗಳ ಕರ್ಮಕಾಂಡ ಹೊರ ಬರುತ್ತಿಂದAತೆ ಶಾಲೆಗಳ ಕಳ್ಳಾಟ ಬಯಲಿಗೆಳೆಯಲು 3 ಸದಸ್ಯರ ಸಮಿತಿ ರಚಿಸಿ, ತನಿಖೆಗೆ ಗ್ರೀನ್ ಸಿಗ್ನಲ್ ನೀಡಿತ್ತು. ಈಗ ಸಮಿತಿಯ ವರದಿ ಹೊರಬಂದಿದ್ದು, ಖಾಸಗಿ ಶಾಲೆಗಳ ಕಳ್ಳಾಟವು ಬಯಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1645 ಅನಧಿಕೃತ ಶಾಲೆಗಳು ತಲೆ ಎತ್ತಿವೆ. ಕೆಲ ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕದ್ದು ಮುಚ್ಚಿ ಕ್ಲಾಸ್‌ನಲ್ಲಿ ಅಃSಇ, IಅSಇ ಪಠ್ಯ ಬೋಧಿಸ್ತಿದ್ರೆ, ಮತ್ತೆ ಕೆಲವು ಶಾಲೆಗಳು ಶಿಕ್ಷಣ ಇಲಾಖೆಯ ಅನುಮತಿಯನ್ನೇ ಪಡೆಯದೆ ಶಾಲೆ ನಡೆಸುತ್ತಿವೆ. ಈ ಎಲ್ಲ ಕಳ್ಳಾಟದ 1645 ಶಾಲೆಗಳಿಗೆ ಶಿಕ್ಷಣ ಇಲಾಖೆ ನೋಟಿಸ್ ನೀಡಿದ್ದು ಡೆಡ್ ಲೈನ್ ಫಿಕ್ಸ್ ಮಾಡಿದೆ.

ಪೋಷಕರಿಗೆ ಸುಳ್ಳು ಹೇಳಿ ದಾಖಲಾತಿ ಮಾಡಿಸಿಕೊಂಡಿರುವ ಶಾಲೆಗಳಿಗೆ ಬೆಂಡೆತ್ತಲು ಸರ್ಕಾರವೂ ಸಜ್ಜಾಗಿದೆ. ಅನಧಿಕೃತ ಶಾಲೆಗಳಿಗೆ 1 ತಿಂಗಳ ಗಡುವು ನೀಡಿದ್ದು, ಕಾಲಮಿತಿಯೊಳಗೆ ಸೂಕ್ತ ದಾಖಲೆ ಸಲ್ಲಿಸದಿದ್ದರೆ, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ದಾಖಲಾತಿಗೆ ಬ್ರೇಕ್ ಹಾಕುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.

ಇನ್ನುಮುಂದೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ಸಿಲೆಬಸ್, ಸೌಲಭ್ಯ ಏನು, ಪಠ್ಯಕ್ರಮ ಎಲ್ಲ ಡಿಟೈಲ್ಸ್ ಗಳನ್ನು ಶಾಲೆಯ ಮುಂದೆ ದೊಡ್ಡದಾಗಿ ಬೋರ್ಡ್ ಹಾಕಬೇಕು. ದಾಖಲಾತಿ ವೇಳೆ ಪೋಷಕರಿಗೆ ಈ ಫಲಕ ಸ್ಪಷ್ಟವಾಗಿ ತೋರಿಸುವಂತಿರಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಕಂಪ್ಲೀಟ್ ಡಿಟೈಲ್ಸ್ ಮಾಹಿತಿಯನ್ನ ಶಿಕ್ಷಣ ಇಲಾಖೆ ಸ್ಟ್ಯಾಟ್ಸ್ ಗೆ ಹಾಕಲು ಮುಂದಾಗಿದ್ದು ರ್ಯಾಂಡಮ್ ಸೆಲೆಕ್ಷನ್ ಮೂಲಕ ಶಾಲೆಗಳ ಸ್ಥಳ ಪರಿಶೀಲನೆಗೂ ಇಲಾಖೆ ಮುಂದಾಗಿದೆ. ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡುವ ವಂಚಿಸುವ ಶಾಲೆಗಳಿಗೆ ಕನಿಷ್ಠ 2 ವರ್ಷಗಳ ಅವಧಿಯವರೆಗೆ ಮಾನ್ಯತೆಯನ್ನ ರದ್ದುಗೊಳಿಸುವ ಪ್ರಕ್ರಿಯೆಗೆ ಇಲಾಖೆ ಮುಂದಾಗಿದೆ.

Leave a Reply

Your email address will not be published. Required fields are marked *