ಕಾರ್ಕಳ : ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆ ಬಟ್ಯಾರುಮನೆ ಎಂಬಲ್ಲಿ ಪುತ್ರನ ಸಾವಿಗೆ ಮನನೊಂದು ವೃದ್ಧ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರ್ವಾಶೆಯ ರತ್ನಾವತಿ (85ವ) ಆತ್ಮಹತ್ಯೆ ಮಾಡಿಕೊಂಡವರು.
ರತ್ನಾವತಿ ನಾಯಕ್ ಅವರ ಪುತ್ರ ಹರಿಶ್ಚಂದ್ರ ನಾಯಕ್ ಅವರು ಮಾ.26ರಂದು ಅಸೌಖ್ಯದಿಂದ ಮೃತಪಟ್ಟಿದ್ದು, ಮಗನ ಸಾವಿನಿಂದ ರತ್ನಾವತಿ ತುಂಬಾ ನೊಂದಿದ್ದರು. ಇದೇ ಕಾರಣಕ್ಕೆ ಮಾ.26 ರಂದು ರಾತ್ರಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.