ಕಾರ್ಕಳ: ಕಾರ್ಕಳ ತಾಲೂಕನಾದ್ಯಂತ ದನಗಳ್ಳರ ಹಾವಳಿಯು ಭಾರೀ ಸುದ್ದಿ ಮಾಡಿರುವ ಬೆನ್ನಲ್ಲೇ ಕಾರ್ಕಳದ ತೆಳ್ಳಾರು ಹಾಗೂ ಅಜೆಕಾರು ಎಂಬಲ್ಲಿAದ ಕದ್ದ ದನಗಳನ್ನು ಕಾರ್ಕಳ ಪೊಲೀಸರು ಕಸಾಯಿಖಾನೆಯಿಂದಲೇ ವಶಪಡಿಸಿ ದನಗಳ ಮಾಲೀಕರಿಗೆ ಮರಳಿಸಿದ ಘಟನೆ ನಡೆದಿದೆ.
ಅಜೆಕಾರು ಮರ್ಣೆ ಗ್ರಾಮದ ಬೊಂಡುಕಮೇರಿ ನಿವಾಸಿ ಅರ್ಥರ್ ಪ್ರಕಾಶ್ ಡಿಸೋಜ ಹಾಗೂ ತೆಳ್ಳಾರು ಮುಡಾಯಿಬೆಟ್ಟು ಸ್ವರೂಪ್ ಆಚಾರ್ಯ ಎಂಬವರ ಹಟ್ಟಿಯಿಂದ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ದನಗಳನ್ನು ಕದ್ದೊಯ್ದಿದ್ದರು.ಈ ಪ್ರಕರಣದ ಜಾಡುಹಿಡಿದ ಕಾರ್ಕಳ ನಗರ ಹಾಗೂ ಅಜೆಕಾರು ಠಾಣಾ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳ್ನು ಪರಿಶೀಲಿಸಿ ಸುರತ್ಕಲ್ ಕಾಟಿಪಳ್ಳಿದ ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿ ವಧಿಸಲು ಕೂಡಿಹಾಕಿದ್ದ ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಪೈಕಿ ಅಜೆಕಾರು ಪ್ರಕಾಶ್ ಡಿಸೋಜ ಎಂಬವರ ಎರಡು ದನಗಳ ಪೈಕಿ ಒಂದು ದನವು ತುಂಬು ಗಬ್ಬದ ದನವಾಗಿದ್ದು, ಪೊಲೀಸರು ದನವನ್ನು ಪೊಲೀಸ್ ಠಾಣೆಗೆ ತುರುವಾಗಲೇ ದನವು ಕರುವಿಗೆ ಜನ್ಮ ನೀಡಿದೆ. ದನಗಳ್ಳತನದ ವಿರುದ್ಧ ಕಾರ್ಕಳ ನಗರ ಠಾಣಾ ಎಸೈ ಪ್ರಸನ್ನ,ಅಜೆಕಾರು ಠಾಣಾಧಿಕಾರಿ ತಿಮ್ಮೇಶ್ ಬಿ.ಎಂ ಅವರ ನೇತೃತ್ವದ ಪೊಲೀಸ್ ತಂಡ ಕಠಿಣಕ್ರಮ ಕೈಗೊಳ್ಳುತ್ತಿದ್ದು ದನಗಳ್ಳತನವನ್ನು ಬೇಧಿಸಿ ದನಗಳನ್ನು ಅವುಗಳ ಮಾಲೀಕರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ