ಕಾರ್ಕಳ: ರಾಷ್ರೀಯ ಹೆದ್ದಾರಿಗಾಗಿ ತಾಲೂಕಿನ ಸಾಣೂರು ಗ್ರಾಮದ ಮೂಲಕ ಹಾದು ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ನಡೆಸಿದ ಭೂ-ಸ್ವಾಧೀನ ಪ್ರಕ್ರಿಯೆಯಲ್ಲಿ ಸಂತ್ರಸ್ತರಿಗೆ ಒಂದು ತಿಂಗಳೊಳಗಾಗಿ ಪರಿಹಾರ ವಿತರಿಸುವಂತೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಹೇಳಿದ್ದಾರೆ.
ಅವರು ಕಾರ್ಕಳ ತಾ.ಪಂ.ಸಭಾAಗಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಹೆದ್ದಾರಿಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಸಾಣೂರಿನಲ್ಲಿ ಭೂ-ಸ್ವಾಧೀನಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರ ಸಭೆ ನಡೆಸಿ ಮಾತನಾಡಿದರು.
ಸಾಣೂರು ಗ್ರಾ.ಪಂ.ಮಾಜಿ ಅಧ್ಯಕ್ಷ ನರಸಿಂಹ ಕಾಮತ್ ಮಾತನಾಡಿ, ನವೆಂಬರ್ ತಿಂಗಳಲ್ಲಿ ಸಭೆ ನಡೆಸಿದ ಬಳಿಕ ಹತ್ತು ದಿನಗಳೊಳಗಾಗಿ ಎಲ್ಲಾ ಸಂತ್ರಸ್ತರನ್ನು ಕರೆಸಿ ಕಂದಾಯ ಅದಾಲತ್ ನಡೆಸುವುದಾಗಿ ಕಳೆದ ನವೆಂಬರ್ ತಿಂಗಳಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದೀರಿ. ಆದರೆ ಇದೀಗ ಆರು ತಿಂಗಳ ಬಳಿಕ ಸಭೆ ನಡೆಸಿದ್ದೀರಿ. ಈವರೆಗೆ ಯಾರಿಗೂ ಸಮರ್ಪಕ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ. 148 ಸಂತ್ರಸ್ತರ ಪೈಕಿ 23 ಜನ ನ್ಯಾಯಾಲಯಕ್ಕೆ ಮೊರೆ ಹೋದ ಪರಿಣಾಮ ಹೆಚ್ಚುವರಿ 9 ಕೋಟಿ ರೂ. ಪರಿಹಾರವನ್ನು ವಿತರಿಸುವಂತೆ ಆದೇಶವಾಗಿದ್ದರೂ, ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದೀಗ ತಡೆಯಾಜ್ಞೆ ಇರುವ ಭೂಮಿಯಲ್ಲೂ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ರತ್ನಾಕರ ಶೆಟ್ಟಿ ಮಾತನಾಡಿ, ಶೇ.80ರಷ್ಟು ಭೂ ಸ್ವಾಧೀನದ ಬಳಿಕವೇ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ಕಾನೂನು ಇದೆ. ಆದರೆ ಇಲ್ಲಿ ಅದು ಅನ್ವಯವಾಗಿದೆಯೇ ಎಂದು ಪ್ರಶ್ನಿಸಿದರು. ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಪೂಜಾರಿ ಮಾತನಾಡಿ, ಕಾಮಗಾರಿಯ ವೇಳೆ ವಿದ್ಯುತ್ ಲೈನ್ ಮತ್ತು ಪೈಪ್ಲೈನ್ಗಳಿಗೆ ಭಾರೀ ಸಮಸ್ಯೆಯಾಗುತ್ತಿದ್ದು, ಅಧಿಕಾರಿಗಳು ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸುತ್ತಿಲ್ಲ ಎಂದರು.
ಡಿಸಿ ಕೈಗೊಂಡ ನಿರ್ಣಯಗಳು:
* ಭೂ ಸಂತ್ರಸ್ತರಿಗೆ ತಕ್ಷಣ ಪರಿಹಾರ ವಿತರಿಸುವುದು.
* ಕುಡಿಯುವ ನೀರಿನ ಪೈಪ್ಲೈನ್ ಹಾಗೂ ವಿದ್ಯುತ್ ಕಂಬಗಳಿAದ ತೊಂದರೆಯಾಗದAತೆ ಕ್ರಮ ವಹಿಸುವುದು.
* ಅಪಘಾತಗಳು ಸಂಭವಿಸದAತೆ ಸುರಕ್ಷತಾ ವಿಧಾನಗಳನ್ನು ಅನುಸರಿಸುವುದು. ಪಿಎಸ್ಐ ಅವರನ್ನು ಸಂಪರ್ಕಿಸಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು.
* ಟ್ರಕ್ ಯಾರ್ಡ್ ನಿರ್ಮಾಣಗೊಳಿಸುವ ಸ್ಥಳವನ್ನು ಪರಿಶೀಲಿಸುವುದು. ವಿರೋಧವಿದ್ದಲ್ಲಿ ಅನ್ಯ ಸ್ಥಳವನ್ನು ಗುರುತಿಸುವುದು.
* ಸರಕಾರಿ ಆಸ್ತಿಯನ್ನು ನಿರ್ಲಕ್ಷಿಸದೆ ಆ ಬಗ್ಗೆ ಕಾಳಜಿ ವಹಿಸುವುದು.
ಯೋಜನಾ ಕಚೇರಿಯಿಂದ ಮಾರ್ಚ್ 1ಕ್ಕೆ ಡಿ.ಸಿ. ಮೇಲ್ಮನವಿಗೆ ಪೂರಕ ದಾಖಲೆ ಸಲ್ಲಿಸಿದ್ದಾರೆ. ಅದನ್ನು ಆದಷ್ಟು ಶೀಘ್ರದಲ್ಲಿ ಪರಿಶೀಲಿಸಿ ಅರ್ಜಿ ವಿಲೇವಾರಿ ಮಾಡಿ ಹೈಕೋರ್ಟ್ ಸೂಚನೆಯನ್ವಯ ಹೆಚ್ಚುವರಿ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ರಾಷ್ಟಿçÃಯ ಹೆದ್ದಾರಿ 169ರ ಅಧಿಕಾರಿ ಲಿಂಗೇಗೌಡರಿಗೆ ಸೂಚಿಸಿದ್ದಾರೆ.
ಸಹಾಯಕ ಕಮಿಷನರ್ ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿ ರಾಜು, ಕಾರ್ಕಳ ತಹಸೀಲ್ದಾರ್ ಅನಂತಶAಕರ ಬಿ. ಉಪಸ್ಥಿತರಿದ್ದರು