Share this news

ಕಾರ್ಕಳ: ನಿರ್ಭೀತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದ ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಮದನ್ ಮೋಹನ್ ಹೇಳಿದರು.

ಅವರು ಗುರುವಾರ ಕಾರ್ಕಳ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಕಾರ್ಕಳ ವಿಧಾನಸಭಾ ಚುನಾವಣಾ ಪ್ರಕ್ರಿಯೆಯಲ್ಲಿ ಕಾರ್ಕಳ ಹಾಗೂ ಹೆಬ್ರಿ ತಹಶೀಲ್ದಾರ್ ಸಹಾಯಕ ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಹಾಗೂ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಎಂ.ಸಿ.ಸಿ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು. ಚುನಾವಣೆಗೆ ಸಂಬAಧಿಸಿದAತೆ ಅಕ್ರಮಗಳನ್ನು ತಡೆಗಟ್ಟಲು ವಿಧಾನಸಭಾ ವ್ಯಾಪ್ತಿಯ ಗಡಿಗಳಲ್ಲಿ 5 ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಗಡಿಗಳಲ್ಲಿ ಎಲ್ಲಾ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದೆ,ಇದರ ಜತೆಗೆ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತಲಾ 3 ಅಧಿಕಾರಿಗಳಿರುವ 3 ಫ್ಲೈಯಿಂಗ್ ಸ್ಕ್ವಾಡ್  ರಚಿಸಲಾಗಿದೆ ಎಂದು ಮದನ್ ಮೋಹನ್ ಮಾಹಿತಿ ನೀಡಿದರು.

ವಿಧಾನಸಭಾ ಕ್ಷೇತ್ರದ 209 ಮತಗಟ್ಟೆಗಳನ್ನು ಒಟ್ಟು 23 ಸೆಕ್ಟರ್ ಗಳಾಗಿ ವಿಂಗಡಿಸಲಾಗಿದ್ದು 10ರಿಂದ 15 ಮತಗಟ್ಟೆಗಳಿಗೆ ತಲಾ ಒಬ್ಬರು ಸೆಕ್ಟರ್ ಅಧಿಕಾರಿ ನೇಮಿಸಲಾಗಿದ್ದು ಅವರು ಚುನಾವಣೆಯ ಉಸ್ತುವಾರಿಯನ್ನು ನಿರ್ವಹಿಸಲಿದ್ದಾರೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಸಭೆಗಳ ವಿಡಿಯೋ ಚಿತ್ರೀಕರಣ ಮಾಡುವ ನಿಟ್ಟಿನಲ್ಲಿ ವೀಕ್ಷಕರನ್ನು ನೇಮಿಸಲಾಗಿದ್ದು, ಒಬ್ಬ ಅಭ್ಯರ್ಥಿ ಗರಿಷ್ಠ 40 ಲಕ್ಷ ವೆಚ್ಚ ಮಾಡಲು ಅವಕಾಶವಿದೆ ಎಂದರು.

ಮನೆಯಿAದಲೇ ಮತದಾನಕ್ಕೆ ಅವಕಾಶ:
ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಟ್ಟಗೆ ಬರಲು ಸಾಧ್ಯವಿಲ್ಲದವರಿಗೆ ಮನೆಯಿಂದಲೇ ಮತದಾನ ಮಾಡುವ ವಿನೂತನ ಪ್ರಯೋಗವನ್ನು ಆಯೋಗ ಅಳವಡಿಸಿದೆ. 80 ವರ್ಷ ಮೇಲ್ಪಟ್ಟ ಅನಾರೋಗ್ಯಪೀಡಿತರಿಗೆ, ವಿಕಲಚೇತನರಿಗೆ ಹಾಗೂ ಕೋವಿಡ್ ಪಾಸಿಟಿವ್ ಹೊಂದಿರುವ ಮತದಾರರು ಪೋಸ್ಟಲ್ ಬ್ಯಾಲೆಟ್ ಮೂಲಕ ಮನೆಯಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಏಪ್ರಿಲ್ 13ರಂದು ಅಧಿಸೂಚನೆ ಹೊರಡಿಸಿದ ದಿನಾಂಕದAದು ಮನೆಯಿಂದಲೇ ಮತದಾನ ಮಾಡಲು ಇಚ್ಚಿಸುವವರು ನಮೂನೆ 12ಬಿ ಯನ್ನು ಭರ್ತಿಮಾಡಿ ತಮ್ಮ ಮತಗಟ್ಟೆಯ ಬಿಎಲ್‌ಓಗಳಿಗೆ ನೀಡಿದರೆ ಅಂತಹ ಮತದಾರರಿಗೆ ಅಂಚೆ ಮತಪತ್ರಗಳನ್ನು ವಿತರಿಸಲಾಗುತ್ತದೆ ಬಳಿಕ ಮತಗಟ್ಟೆ ಅಧಿಕಾರಿಗಳ ತಂಡ ಅರ್ಜಿಸಲ್ಲಿಸಿದವರ ಮನೆಗೆ ತೆರಳಿ ಗೌಪ್ಯತಾ ನಿಯಮದೊಂದಿಗೆ ಮತಚಲಾಯಿಸಲು ಅವಕಾಶ ಮಾಡಲಿದ್ದಾರೆ. ಆದರೆ ಅಂಚೆ ಮತ ಚಲಾಯಿಸಲು ಮೂಲಕ ಅರ್ಜಿ ಸಲ್ಲಿಸಿದವರು ಮತದಾನ ಮಾಡದಿದ್ದಲ್ಲಿ ಅವರಿಗೆ ಮತಗಟ್ಟೆಯಲ್ಲಿ ಮತದಾನ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡಲಗುವುದಿಲ್ಲ ಆದ್ದರಿಂದ ಮತದಾರರು ಬಹಳ ಎಚ್ಚರಿಕೆಯಿಂದ ಮತದಾನದ ಆಯ್ಕೆಯನ್ನು ಆರಿಸಬೇಕೆಂದು ಎಂದು ಮದನ್ ಮೋಹನ್ ಮಾಹಿತಿ ನೀಡಿದರು.

ಸಭೆ, ಶುಭ ಸಮಾರಂಭಗಳಿಗೆ ಅನುಮತಿ ಕಡ್ಡಾಯ:
ಸಾರ್ವಜನಿಕರು ನಡೆಸುವ ಯಾವುದೇ ಸಭೆ ಅಥವಾ ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯವಾಗಿದ್ದು. ಕಾರ್ಯಕ್ರಮ ನಡೆಯುವ ದಿನಾಂಕದಿAದ ಕನಿಷ್ಟ ಎರಡು ದಿನ ಮುಂಚಿತವಾಗಿ ಅನುಮತಿಗಾಗಿ ಆಯೋಗ ನೀಡಿರುವ ಸುವಿಧಾ ತಂತ್ರಾAಶ: ದ ಮೂಲಕ ಅರ್ಜಿ ಸಲ್ಲಿಸಬೇಕು. ಆದರೆ ತಡವಾಗಿ ಬಂದ ಅರ್ಜಿಗಳಿಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲಾಗುವುದಿಲ್ಲ ಎಂದು ಮದನ್ ಮೋಹನ್ ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದAತೆ ಈ ಬಾರಿ ಆಯೋಗವು ಎಂಬ ಆ್ಯಪ್ ಸಿದ್ಧಪಡಿಸಲಾಗಿದ್ದು, ರಾಜಕೀಯ ಪಕ್ಷಗಳ ಬ್ಯಾನರ್ ಅಥವಾ ಇತರೇ ಪ್ರಚಾರ ಸಾಮಾಗ್ರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಂಡಲ್ಲಿ ನಾಗರಿಕರು ಈ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ಫೋಟೋ ಅಥವಾ ವಿಡಿಯೋ ಅಪಲೋಡ್ ಮಾಡಿದ್ದಲ್ಲಿ ಲೋಕೇಷನ್ ಆಧಾರದಲ್ಲಿ ಅಧಿಕಾರಿಗಳು ಅದನ್ನು ತೆರವುಗೊಳಿಸಲಿದ್ದಾರೆ ಎಂದರು.

 

Leave a Reply

Your email address will not be published. Required fields are marked *