ಕಾರ್ಕಳ : ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿAದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಉದಯ ಕುಮಾರ (35ವ) ಎಂಬವರು ಮುಂಡ್ಕೂರಿನ ಜಾರಿಗೆಕಟ್ಟೆ ಎಂಬಲ್ಲಿ ವಾಸವಾಗಿದ್ದು, ಕಳೆದ 15 ದಿನಗಳ ಹಿಂದೆ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿರುವ ತಂದೆಯ ಮನೆಗೆ ಹೋಗಿದ್ದು ಪ್ರತಿದಿನ ಪತ್ನಿಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದರು.
ಆದರೆ ಕಳೆದ 8 ದಿನಗಳಿಂದ ಉದಯ ಕುಮಾರ್ ಅವರು ಕರೆ ಸ್ವೀಕರಿಸದ ಹಿನ್ನಲೆ ಅವರ ಪತ್ನಿ ಬೇಲಾಡಿಯ ಗಂಡನ ಮನೆಗೆ ಹೋಗಿ ವಿಚಾರಿಸಿದಾಗ ಉದಯ್ ಕುಮಾರ್ ಅವರು ಮಾ.25 ರಂದು ಕಾರ್ಕಳಕ್ಕೆ ಹೋಗಿಬರುತ್ತೇನೆಂದು ಹೇಳಿ ಹೋಗಿದ್ದಾರೆಂದು ತಿಳಿಸಿದ್ದಾರೆ. ಆದರೆ ಉದಯ್ ಕುಮಾರ್ ಅವರು ಅಂದಿನಿAದ ಬೇಲಾಡಿಯ ಮನೆಗೂ ಹೋಗದೇ ಪತ್ನಿಯ ಮನೆಗೂ ಬಾರದೇ ನಾಪತ್ತೆಯಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.