ಕಾರ್ಕಳ: ದುಡಿಯುವ ವರ್ಗದ ಹಾಗೂ ಹಿಂದುಳಿದ ವರ್ಗದವರ ಏಳಿಗೆಗಾಗಿ ಕಾರ್ಕಳದಿಂದ ಜೈ ಹನುಮಾನ್ ಸೇನೆಯ ಅಭ್ಯರ್ಥಿಯಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವುದಾಗಿ ಜೈ ಹನುಮಾನ್ ಸೇನೆಯ ಸಂಚಾಲಕ ಹನುಮಂತಪ್ಪ ಎ ರಾಯಚೂರು ಹೇಳಿದ್ದಾರೆ
ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ನಮ್ಮೆಲ್ಲರ ಆರಾಧ್ಯ ದೈವ ಹನುಮ ಹುಟ್ಟಿದ ಕರ್ನಾಟಕದಲ್ಲಿ ಹನುಮನ ಉದಾತ್ತ ವಿಚಾರಗಳನ್ನು ಭಕ್ತರಿಗೆ ತಲುಪಿಸುವಲ್ಲಿ ಕಾರ್ಯದಲ್ಲಿ ಹನುಮ ಸೇನೆ ತೊಡಗಿಸಿಕೊಂಡಿದೆ.ಈ ನಿಟ್ಟಿನಲ್ಲಿ ಹನುಮನ ಜನ್ಮಭೂಮಿ ಅಂಜನಾದ್ರಿಯಿAದ ಜೈ ಹನುಮಾನ್ ಸೇನೆಯ ಯಾನ ರಾಜ್ಯಾದ್ಯಂತ ಆರಂಭಗೊAಡಿದೆ.ಹುನುಮನ ಆದರ್ಶಗಳನ್ನು ಇಟ್ಟುಕೊಂಡು ಹಿಂದೂ ಧರ್ಮದ ರಕ್ಷಣೆಗಾಗಿ ಹಾಗೂ ಕಾರ್ಕಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಈ ಬಾರಿ ಜೈ ಹನುಮಾನ್ ಸೇನೆ ಸ್ಪರ್ಧಿಸಲಿದೆ ಮಾತ್ರವಲ್ಲದೇ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದೆಂದು ಹನುಮಂತಪ್ಪ ಘೋಷಣೆ ಮಾಡಿದರು.