ಬೆಂಗಳೂರು: ಇಂಡಿಯಾ ಮನಿ ಕಂಪನಿಯ ಸಿಇಓ ಸುಧೀರ್ ಹಾಗೂ ಅವರೊಂದಿಗೆ ರಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ಇಬ್ಬರನ್ನೂ ಬಂಧಿಸಿದ ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿದ್ದರು. ಇಬ್ಬರಿಗೂ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಇಂಡಿಯಾ ಮನಿ ಆಪ್ ಸಿಇಓ ಸುಧೀರ್ ಸೇರಿದಂತೆ ಹಲವರ ವಿರುದ್ಧ 24 ಮಂದಿಯಿAದ ವಂಚನೆ ದೂರು ದಾಖಲಾಗಿತ್ತು. ದೂರಿನಲ್ಲಿ ಇಂಡಿಯಾ ಮನಿ ಕಂಪನಿಗೆ ಸೇರಿದ್ದ ಫ್ರೀಡಂ ಆಪ್ ಇನ್ಸ್ಟಾಲ್ ಮಾಡಿಕೊಂಡ್ರೇ, ಮಾಡಿಸಿದ್ರೇ ಹಣ ಗಳಿಸಬಹುದು ಎನ್ನುವಂತೆ ಉದ್ಯೋಗಿಗಳಿಗೆ ಆಮಿಷ ಒಡ್ಡಿ, ಲಕ್ಷಾಂತರ ಮಂದಿಯಲ್ಲಿ ಆಪ್ ಇನ್ ಸ್ಟಾಲ್ ಮಾಡಿಸಲಾಗಿತ್ತು.
ಹೀಗೆ ಆಪ್ ಗಳನ್ನು ಉದ್ಯೋಗಿಗಳು ವಿವಿಧ ಜನರಿಗೆ, ತಮ್ಮ ಸಂಬAಧಿಕರಿಗೆ ಇನ್ ಸ್ಟಾಲ್ ಮಾಡಿಕೊಳ್ಳಲು ಸೂಚಿಸಿ, ಮಾಡಿಸಿದ್ದರೂ ನಿಗದಿಪಡಿಸಿದ್ದ ಹಣವನ್ನು ನೀಡದೇ ಇಡಿಯಾ ಮನಿ ಸಿಇಓ ಸುಧೀರ್ ವಂಚಿಸಿದ್ದರು. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮೊದಲ ಪ್ರಕರಣದಲ್ಲಿ ಸುಧೀರ್ ಜಾಮೀನು ಪಡೆದಿದ್ದರು. ಆದರೆ ಬೆಂಗಳೂರು ದಕ್ಷಿಣ ವಿಭಾಗದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 4 ಪ್ರಕರಣ ಸಂಬAಧ ಬನಶಂಕರಿ ಠಾಣೆಯ ಪೊಲೀಸರು ಇಂಡಿಯಾ ಮನಿ ಆಪ್ ಸಿಇಒ ಸುಧೀರ್ ಹಾಗೂ ರಘು ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬನಶಂಕರಿ ಠಾಣೆಯ ಪೊಲೀಸರು ನ್ಯಾಯಾಲಾಯದ ಮುಂದೆ ಹಾಜರು ಪಡಿಸಿದ್ದರು. ಅವರಿಗೆ ಇದೀಗ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ ಇಡಿಯಾ ಮನಿ ಸಿಇಓ ಸುಧೀರ್ ಹಾಗೂ ರಘು ಜೈಲು ಸೇರುವಂತೆ ಆಗಿದೆ.