ಕಾರ್ಕಳ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಕಚೇರಿ ಕಾರ್ಕಳ ಸುನಿಲ್ ಕುಮಾರ್ ಅವರ ವಿಕಾಸ ಕಚೇರಿಯಲ್ಲಿ ಗುರುವಾರ ಉದ್ಘಾಟನೆಯಾಯಿತು.
ಬಿಜೆಪಿ ಹಿರಿಯ ಮುಖಂಡ ಬೋಳ ಪ್ರಭಾಕರ ಕಾಮತ್ ಚುನಾವಣಾ ಕಚೇರಿ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಎದುರಾಳಿ ಯಾರು ಎನ್ನುವುದು ಮುಖ್ಯವಲ್ಲ, ನಾವೆಲ್ಲರೂ ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ದುಡಿಯುವ ಮೂಲಕ ಕಾರ್ಕಳದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಸುನಿಲ್ ಕುಮಾರ್ ಅವರ ಹಿಂದುತ್ವವನ್ನು ಪ್ರಶ್ನಿಸುವವರು ಹಿಂದುತ್ವದ ಕುರಿತು ಎಷ್ಟು ಹೋರಾಟ ಮಾಡಿದ್ದಾರೆ ಎಂದು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಎಂ.ಕೆ ವಿಜಯಕುಮಾರ್ ಮಾತನಾಡಿ, ಸುನಿಲ್ ಕುಮಾರ್ ಅವರಿಗೆ ಎದುರಾಳಿ ಯಾರೆನ್ನುವುದೇ ಗೊತ್ತಿಲ್ಲ, ಹಾಗಾಗಿ ಸುನಿಲ್ ಕುಮಾರ್ ಎಷ್ಟು ಅಂತರದಿಂದ ಗೆಲುವು ಸಾಧಿಸುತ್ತಾರೆ ಎನ್ನುವುದು ಮುಖ್ಯ,ಈ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಯಾವ ಅಪಪ್ರಚಾರಕ್ಕೂ ಕಿವಿಗೊಡದೇ ಭರ್ಜರಿ ಅಂತರದಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ವಿ.ಸುನಿಲ್ ಕುಮಾರ್, ಟಿ.ರಾಮಚಂದ್ರ ನಾಯಕ್, ವಿಜೇಂದ್ರ ಕಿಣಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು