Share this news

ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಒಟ್ಟು 13 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಶುಕ್ರವಾರ ಚುನಾವಣಾಧಿಕಾರಿ ಮದನ್ ಮೋಹನ್ ನೇತೃತ್ವದ ಅಧಿಕಾರಿಗಳ ತಂಡ ನಾಮಪತ್ರಗಳ ಪರಿಶೀಲನೆ ನಡೆಸಿತು.

ಈ ಪೈಕಿ 11 ನಾಮಪತ್ರಗಳು ಕ್ರಮಬದ್ದವಾಗಿದ್ದರೆ,2 ನಾಮಪತ್ರಗಳು ತಿರಸ್ಕೃತಗೊಂಡಿವೆ.
11 ನಾಮಪತ್ರಗಳ ಪೈಕಿ ಕಾಂಗ್ರೆಸ್ ಪಕ್ಷದಿಂದ ಉದಯ ಶೆಟ್ಟಿ ಮುನಿಯಾಲು, ಬಿಜೆಪಿಯಿಂದ ವಿ.ಸುನಿಲ್ ಕುಮಾರ್, ಜೆಡಿಎಸ್ ನಿಂದ ಶ್ರೀಕಾಂತ ಪೂಜಾರಿ, ಆಮ್ ಆದ್ಮಿ ಪಕ್ಷದಿಂದ ಡೇನಿಯಲ್ ಫೆಡ್ರಿಕ್ ರೇಂಜರ್, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಅರುಣ್ ದೀಪಕ್ ಮೆಂಡೋನ್ಸಾ ಸೇರಿದಂತೆ 5 ನಾಮಪತ್ರಗಳು ರಾಜಕೀಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿದ್ದು, ಉಳಿದಂತೆ ಪಕ್ಷೇತರರಾಗಿ ಕೃಷ್ಣ ಶೆಟ್ಟಿ, ಪ್ರಮೋದ್ ಮುತಾಲಿಕ್, ಡಾ.ಮಮತಾ ಹೆಗ್ಡೆ,ವಿದ್ಯಾಲಕ್ಷ್ಮೀ, ಸುಧಾಕರ ಆಚಾರ್ಯ ಹಾಗೂ ಕೆ.ಹರೀಶ್ ಅಧಿಕಾರಿ ಸೇರಿದಂತೆ ಒಟ್ಟು 6 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ.

ಉಳಿದಂತೆ ಆಮ್ ಆದ್ಮಿ ಪಕ್ಷದಿಂದ ದಯಾನಂದ ಶೆಟ್ಟಿ ಸಲ್ಲಿಸಿದ್ದ ನಾಮಪತ್ರ ಬದಲಿ ಅಭ್ಯರ್ಥಿ ಕಾರಣದಿಂದ ತಿರಸ್ಕೃತಗೊಂಡರೆ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ ಉದಯಕುಮಾರ್ ಎಂ ಸಲ್ಲಿಸಿದ್ದ ನಾಮಪತ್ರ ಸೂಚಕರಿಲ್ಲದ ಕಾರಣದಿಂದ ತಿರಸ್ಕೃತಗೊಂಡಿದೆ.

ಒಟ್ಟಿನಲ್ಲಿ ಸಧ್ಯಕ್ಕೆ 11 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದರೂ,ಏಪ್ರಿಲ್24 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿರುವ ಹಿನ್ನೆಲೆಯಲ್ಲಿ ಅಂತಿಮ ಸ್ಪರ್ಧಾ ಕಣದಲ್ಲಿ ಯಾರೆಲ್ಲ ಉಳಿಯಲಿದ್ದಾರೆ ಎಂದು ಅಂದೇ ನಿರ್ಧಾರವಾಗಲಿದೆ.

Leave a Reply

Your email address will not be published. Required fields are marked *