ಕಾರ್ಕಳ: ಸಾಣೂರು ಮುರತ್ತಂಗಡಿ ಚುನಾವಣಾ ಚೆಕ್ ಪೋಸ್ಟ್ ಮೂಲಕ ಎರಡು ಸ್ಕೂಟರ್ ಗಳಲ್ಲಿ ಕಾರ್ಕಳಕ್ಕೆ ಅಕ್ರಮವಾಗಿ ಸ್ಪೋಟಕ ವಸ್ತುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾರ್ಕಳ ಪೊಲೀಸರು ಬಂಧಿಸಿ,ಬಂಧಿತರಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಮಂಗಳೂರು ಪಚ್ಚನಾಡಿ ನಿವಾಸಿಗಳಾದ ನಾಗರಾಜ, ಶಂಕರ ಹಾಗೂ ರಾಘವೇಂದ್ರ ಎಂದು ತಿಳಿದುಬಂದಿದೆ.
ಎರಡು ಸ್ಕೂಟರ್ ಗಳಲ್ಲಿ 30 ಎಲೆಕ್ಟ್ರಿಕ್ ಡಿಟೋನೇಟರ್ ಗಳನ್ನು ತುಂಬಿಸಿಕೊಂಡು ಕಾರ್ಕಳಕ್ಕೆ ತರುತ್ತಿದ್ದಾಗ ಚೆಕ್ ಪೋಸ್ಟ್ ನಲ್ಲಿ ಕಾರ್ಕಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಲೋಕೇಶ್ ಎ ಸಿ, ಎಸೈ ಪ್ರಸನ್ನ ಎಮ್ ಎಸ್, ಎಎಸ್ ಐ ರಾಜೇಶ್, ಪಿ ಸಿ ಗಜ ನಾಯ್ಕ್ ಹಾಗು ಚೆಕ್ ಪೋಸ್ಟ್ ಅಧಿಕಾರಿ ರಾಜರಾಮ ಶೇರ್ವೆಗಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.