ಕಾರ್ಕಳ : ರಾಷ್ಟçಮಟ್ಟದಲ್ಲಿ ನಡೆಯುವ ಇಂಜಿನಿಯರಿAಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಹಂತದ ಅಂತಿಮ ಫಲಿತಾಂಶದಲ್ಲಿ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಪ್ರಣವ್ ಗುಜ್ಜರ್ ಭೌತಶಾಸ್ತçದಲ್ಲಿ 100 ಪರ್ಸಂಟೈಲ್ ಪಡೆಯುವುದರ ಜತೆಗೆ, ಗಣಿತಶಾಸ್ತçದಲ್ಲಿ 99.5756 ಪರ್ಸಂಟೈಲ್ ಮತ್ತು ರಸಾಯನ ಶಾಸ್ತçದಲ್ಲಿ 99.3912 ಪರ್ಸಂಟೈಲ್‌ನೊAದಿಗೆ ಒಟ್ಟು 99.8421730 ಪರ್ಸಂಟೈಲ್ ಗಳಿಸಿಕೊಂಡು ಉತ್ತಮ ಸಾಧನೆಮಾಡಿದ್ದಾರೆ
ವಿದ್ಯಾರ್ಥಿಗಳಾದ 1. ಪ್ರಣವ್ ಗುಜ್ಜರ್ 99.84217 ಪರ್ಸಂಟೈಲ್, 2. ಶ್ರೇಯಸ್ ಆರ್ ಗೌಡ 98.89945 ಪರ್ಸಂಟೈಲ್, 3. ಧನ್ವಿತ್ ನಾಯಕ್ 98.8703 ಪರ್ಸಂಟೈಲ್, 4. ಸಮೃದ್ಧ್ ನೆಲ್ಲಿ 98.84006 ಪರ್ಸಂಟೈಲ್, 5. ಅರ್ಹನ್ ಎ.ಕೆ 98.60173 ಪರ್ಸಂಟೈಲ್, 6. ಧ್ರುವ ಪಿ.ಬಿ 98.57012 ಪರ್ಸಂಟೈಲ್, 7. ಅಮೃತ್ ಗೌಡ ಪಾಟೀಲ್ 98.53126 ಪರ್ಸಂಟೈಲ್, 8. ರೋಹಿತ್ ಹೆಗ್ಡೆ 98.34645 ಪರ್ಸಂಟೈಲ್, 9. ಚೇತನ್ ಸಿ ಪಾಟೀಲ್ 98.22345ಪರ್ಸಂಟೈಲ್ ಪಡೆದಿರುತ್ತಾರೆ.
ಜ್ಞಾನಸುಧಾದ ಒಟ್ಟು 9 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿAತ ಅಧಿಕ, 45 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿAತ ಅಧಿಕ ಹಾಗೂ 97 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ಒಟ್ಟು 126 ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿಕೊಂಡಿರುತ್ತಾರೆ.
ಈ ಹಿಂದೆ 2020-21 ಮತ್ತು 2021-22ರ ಜೆಇಇ ಮೈನ್ ಅಂತಿಮ ಫಲಿತಾಂಶದಲ್ಲಿಯೂ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೆ ಬೆನ್ನೆಲುಬಾದ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾ ಪರಿಶ್ರಮವನ್ನು ಸಂಸ್ಥೆಯ ಮುಖ್ಯಸ್ಥ ಡಾ.ಸುಧಾಕರ ಶೆಟ್ಟಿ ಅಭಿನಂದಿಸಿದ್ದಾರೆ.