Share this news

ನವದೆಹಲಿ : ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ತಿರಸ್ಕರಿಸಿದ್ದಾರೆ. 2008ರಲ್ಲಿ ಮಹಾರಾಷ್ಟ್ರದಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಕಲ್ಲಿನಿಂದ ಹೊಡೆದು ಕೊಂದ ಆರೋಪಿಯ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಮುರ್ಮು ತಿರಸ್ಕರಿಸಿದ್ದಾರೆ ಎಂದು ರಾಷ್ಟ್ರಪತಿ ಭವನ ಮಾಹಿತಿ ನೀಡಿದೆ.

ಮೇ 3, 2017ರಂದು 55 ವರ್ಷದ ವಸಂತ ಸಂಪತ್ ದುಪಾರೆ ಕ್ಷಮಾದಾನ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ನೇಣು ಶಿಕ್ಷೆಯನ್ನ ಖಾಯಂಗೊಳಿಸಿದೆ. ಈ ಸಂಬಂಧ ಗೃಹ ಸಚಿವಾಲಯದ ಶಿಫಾರಸನ್ನು ಈ ವರ್ಷ ಮಾರ್ಚ್ 28ರಂದು ರಾಷ್ಟ್ರಪತಿಗಳ ಸಚಿವಾಲಯ ಸ್ವೀಕರಿಸಿತ್ತು. ಏಪ್ರಿಲ್ 28, 2023ರಂದು ಕ್ಷಮಾದಾನ ಅರ್ಜಿಯ ಸ್ಥಿತಿಯ ಕುರಿತು ನವೀಕರಣವನ್ನು ನೀಡುತ್ತಾ, ರಾಷ್ಟ್ರಪತಿಗಳ ಸಚಿವಾಲಯವು ಹೇಳಿಕೆಯಲ್ಲಿ “ಏಪ್ರಿಲ್ 10 ರಂದು ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿಯನ್ನ ತಿರಸ್ಕರಿಸಿದ್ದಾರೆ” ಎಂದು ತಿಳಿಸಿದೆ.

2014 ನವೆಂಬರ್ 26ರಂದು ನಾಲ್ಕು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ನಿವಾಸಿ ದುಪಾರೆಗೆ ಮರಣದಂಡನೆ ವಿಧಿಸುವ ವಿಚಾರಣಾ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಪ್ರಕರಣದ ಘಟನೆಗಳನ್ನ ಉಲ್ಲೇಖಿಸಿದ ನ್ಯಾಯಾಲಯ, ಆರೋಪಿಯು ತನ್ನ ನೆರೆಹೊರೆಯವರಾಗಿದ್ದು, ಬಾಲಕಿಯನ್ನು ಮೋಹಿಸಿ ಅತ್ಯಾಚಾರವೆಸಗಿ, ಎರಡು ದೊಡ್ಡ ಕಲ್ಲುಗಳಿಂದ ಹೊಡೆದು ಕೊಂದಿದ್ದಾನೆ ಎಂದು ಹೇಳಿದೆ.

Leave a Reply

Your email address will not be published. Required fields are marked *