Share this news

ಬೆಂಗಳೂರು :  ಬಿಜೆಪಿಯ ಸಕ್ರಿಯ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ವಿರುದ್ಧ ಮತ್ತೆ ಜಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

ಜನವರಿ 20ಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಬೆನ್ನಲ್ಲೆ ಆರೋಪಿಗಳಾದ ತುಫೈಲ್ ಹಾಗೂ ಮಹಮ್ಮದ್ ಜಬ್ಬಿರ್ ವಿರುದ್ಧ ಮತ್ತೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಕೊಡಗಿನ ಮಾಸ್ಟರ್ ಟ್ರೈನರ್ ತುಫೈಲ್ ವಿರುದ್ಧ ಹೆಚ್ಚಿನ ಆರೋಪ ಕೇಳಿ ಬಂದಿದ್ದು, ಫ್ರೀಡಂ ಹಾಲ್‌ನಲ್ಲಿ ಆಯುಧ ಬಳಸುವ ತರಬೇತಿ, .ನಿಷೇಧಿತ ಪಿಎಫ್ಐ ಸಂಘಟನೆಯ ಸರ್ವಿಸ್ ಟೀಂಗೆ ತರಬೇತಿ ಕೊಡುತ್ತಿದ್ದ ಎಂಬ ಆರೋಪವಿದೆ.

ಕೊಡಗು, ಮೈಸೂರು, ತಮಿಳುನಾಡಿನಲ್ಲಿ ಈತನ ದಾಳಿ ಸಂಚು ರೂಪಿಸಿದಲ್ಲದೇ  ನೆಟ್ಟಾರು ಹತ್ಯೆಗೆ ಗೌಪ್ಯ ಸಭೆಯಲ್ಲಿ ಪಿಎಫ್ಐ ಪುತ್ತೂರು ಘಟಕದ ಅಧ್ಯಕ್ಷ ಜಬ್ಬಿರ್ ಕೂಡ ಇದ್ದನೆಂದು ತಿಳಿದುಬಂದಿದೆ

 ಒಂದು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಗೆ ತಯಾರಿ ನಡೆಸಿ, ಸಮಾಜದಲ್ಲಿ ಕೋಮು ದ್ವೇಷ ಮತ್ತು ಅಶಾಂತಿ ಸೃಷ್ಟಿಸುವ PFI ನ ಕಾರ್ಯಸೂಚಿಯ ಭಾಗವಾಗಿಯೇ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ್ದು ಎನ್ನುವುದು ಸ್ಪಷ್ಟವಾಗಿ ವರದಿಯಾಗಿದೆ. ಅಲ್ಲದೇ ಪ್ರವೀಣ್ ನೆಟ್ಟಾರು ಕೊಲೆ ಹಿಂದೆ 2047ಕ್ಕೆ ಭಾರತದಲ್ಲಿ ಇಸ್ಲಾಮಿಸ್​ ಆಳ್ವಿಕೆಯನ್ನ ಜಾರಿಗೆ ತರುವ ತಯಾರಿಗಾಗಿ ನಡೆಸಿದ್ದ ಒಂದು ಕಾರ್ಯಾಚರಣೆ ಎಂದು ಎನ್ ಐ ಎ ಬಹಿರಂಗಪಡಿಸಿದ್ದು ಇದೀಗ ಮತ್ತೊಂದು ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *