ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಮಂಡಳಿ, KSEAB ಇಂದು (ಮೇ 5, 2023) ಕರ್ನಾಟಕ SSLC ಫಲಿತಾಂಶ 2023 ದಿನಾಂಕವನ್ನು ದೃಢೀಕರಿಸುವ ನಿರೀಕ್ಷೆಯಿದೆ. ವರದಿಗಳ ಪ್ರಕಾರ, KSEAB ಅಧಿಕಾರಿಗಳು karresults.nic.in ಮತ್ತು kseab.karnataka.gov.in. ನಲ್ಲಿ SSLC ಫಲಿತಾಂಶವನ್ನು ಮುಂದಿನ ವಾರ ಪ್ರಕಟಿಸಲಾಗುವುದು ಎಂದು ಹಂಚಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕೆಎಸ್ಇಎಬಿ ಅಧಿಕಾರಿಗಳು ಎಸ್ಎಸ್ಎಲ್ಸಿ ಫಲಿತಾಂಶ ಮೇ 8, 2023 ರಂದು ಘೋಷಿಸಬಹುದು ಎಂದು ತಿಳಿಸಿದ್ದಾರೆ. ಕರ್ನಾಟಕ SSLC ಫಲಿತಾಂಶ ದಿನಾಂಕ, ಸಮಯವನ್ನು ಇಂದು ದೃಢೀಕರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾವು ಫಲಿತಾಂಶವನ್ನು ಮೇ 8 ರಂದು ಘೋಷಿಸುವ ಸಾಧ್ಯತೆಯಿದೆ. ಇದು 90 ಪ್ರತಿಶತ ದೃಢೀಕರಿಸಲ್ಪಟ್ಟಿದೆ. ವಾಸ್ತವವಾಗಿ, ನಾಳೆ ನಾವು ನಿರ್ಧಾರ ತೆಗೆದುಕೊಳ್ಳಲು ಸಭೆ ನಡೆಸುತ್ತಿದ್ದೇವೆ. ಆದರೆ ಮೇ 8ರಂದು ಫಲಿತಾಂಶ ಹೊರಬೀಳಲಿದೆ ಎಂಬುದು ಶೇ 90ರಷ್ಟು ದೃಢಪಟ್ಟಿದೆ” ಎಂದು ಕೆಎಸ್ಇಎಬಿ ಕಾರ್ಯದರ್ಶಿ ಎಂ ರೇವಣಸಿದ್ದಪ್ಪ ತಿಳಿಸಿದ್ದಾರ
ಫಲಿತಾಂಶಗಳನ್ನು ಘೋಷಿಸಿದ ನಂತರ, SSLC ಫಲಿತಾಂಶವನ್ನು ಅಧಿಕೃತ ವೆಬ್ಸೈಟ್ – karresults.nic.in ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ SSLC ಫಲಿತಾಂಶವನ್ನು ಡೌನ್ಲೋಡ್ ಮಾಡಲು ತಮ್ಮ SSLC ಹಾಲ್ ಟಿಕೆಟ್ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತು ಇತರ ವಿವರಗಳನ್ನು ನಮೂದಿಸಬೇಕಾಗುತ್ತದೆ.



