ಬೆಂಗಳೂರು : ನಿನ್ನೆಯಷ್ಟೇ ‘ದಿ ಕೇರಳ ಸ್ಟೋರಿ’ ಚಲನಚಿತ್ರ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಕೇರಳ ರಾಜ್ಯದಲ್ಲಿ 32,೦೦೦ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮೂಲಕ ಕಪಟ, ವಂಚನೆ, ಮೋಸದಿಂದ ಹೇಗೆಐಎಸ್‌ಐಎಸ್ ಭಯೋತ್ಪಾದಕರನ್ನಾಗಿ ಮಾಡಲಾಗಿದೆ ಎಂಬ ಸತ್ಯ ಘಟನೆಯನ್ನು ಚಿತ್ರಿಸಲಾಗಿದೆ. ಕರ್ನಾಟಕದಲ್ಲಿಯೂ ಸಾವಿರಾರು ಹಿಂದೂ ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆ. ಈಗಾಗಲೇ ಮಧ್ಯಪ್ರದೇಶ ಸರಕಾರವು ‘ದಿ ಕೇರಳ ಸ್ಟೋರಿ’ ಚಿತ್ರವನ್ನು ಟ್ಯಾಕ್ಸ್ ಫ್ರೀ ಮಾಡಿದೆ. ಕರ್ನಾಟಕದಲ್ಲಿಯೂ ಈ ಚಿತ್ರವನ್ನು ಸರಕಾರವು ‘ಟ್ಯಾಕ್ಸ್ ಫ್ರೀ’ ಮಾಡಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಮೋಹನ ಗೌಡ ಒತ್ತಾಯಿಸಿದ್ದಾರೆ
ಹುಬ್ಬಳ್ಳಿ, ಶಿವಮೊಗ್ಗ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಲವ್ ಜಿಹದ್ ನಡೆಯುತ್ತಿರುವುದು ಎನ್‌ಐಎ ತನಿಖೆಯಲ್ಲಿಯೂ ಬೆಳಕಿಗೆ ಬಂದಿದೆ. ಆದ್ದರಿಂದ ರಾಜ್ಯದ ಯುವಕರು, ಹಿಂದೂ ಯುವತಿಯರು ಈ ಜಿಹಾದ್‌ನ ಬಗ್ಗೆ ಜಾಗೃತರಾಗಿ ಲವ್ ಜಿಹಾದ್ ತಡೆಯಲು ಪ್ರಯತ್ನಿಸುವುದು ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ.